Breaking News

ವ್ಯಕ್ತಿಗೆ ನಿದ್ರೆ ಮಾತ್ರೆ ನೀಡಿ ಲೂಟಿ; ಮಹಿಳೆ ಬಂಧನ

ಪಾಲ್ಘರ್‌: ಡೇಟಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಚಿನ್ನ ಲೂಟಿ ಮಾಡಿದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿ ಅವರಿಂದ 4 ಲಕ್ಷ ರೂ. ಮೌಲ್ಯದ ಕಳವುಗೈದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಪುರುಷರನ್ನು ಸಂಪರ್ಕಿಸಿ, ಅವರನ್ನು ಭೇಟಿಯಾಗಿ ಅವರಿಗೆ ನಿದ್ರೆ ಮಾತ್ರೆಗಳನ್ನು ನೀಡುವ ಮೂಲಕ ಆಭರಣಗಳು ಮತ್ತು ಹಣವನ್ನು ಕಳವು ಮಾಡುತ್ತಿದ್ದರು. ನ. 22ರಂದು ಲಾಡ್ಜ್‌ನಲ್ಲಿ ಇದೇ ರೀತಿ ಲೂಟಿಗೊಳಗಾದ ವಿರಾರ್‌ ಪಶ್ಚಿಮದ ವ್ಯಕ್ತಿಯ ದೂರಿನ ಮೇರೆಗೆ ತನಿಖೆ ನಡೆಸಲಾಯಿತು. ಅವರ ಒಟ್ಟು 1.83 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನ, ಮೊಬೈಲ್‌ ಫೋನ್‌ ಮತ್ತು ಸ್ಮಾರ್ಚ್‌ ವಾಚ್‌ ಅನ್ನು ಆರೋಪಿಗಳು ಕಳವು ಮಾಡಿದ್ದರು. ಉತ್ತರ ಮುಂಬಯಿಯ ಮಾಲ್ವಾನಿ ಮತ್ತು ಹಿಮಾಚಲ ಪ್ರದೇಶದ ಮೂಲದವರಾದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share News

About BigTv News

Check Also

ಹಾಡಹಗಲೇ ಜಿಮ್ ತರಬೇತುದಾರನ ಮರ್ಡರ್! 20 ಸುತ್ತು ಗುಂಡು ಹಾರಿಸಿ ಕೊಲೆಗೈದ ದುಷ್ಕರ್ಮಿಗಳು!

ನವದೆಹಲಿ: ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಜಿಮ್ ತರಬೇತುದಾರನನ್ನು ದುಷ್ಕರ್ಮಿಗಳು ಸುಮಾರು 20 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. …

Leave a Reply

Your email address will not be published. Required fields are marked *