ಸುಳ್ಯ: ಪಂಜ ಗ್ರಾಮ ಪಂಚಾಯತ್ನ ತೆರಿಗೆ ವಸೂಲಾತಿಯ ಹಣವನ್ನು ಬ್ಯಾಂಕ್ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಪಂ ಸಿಬ್ಬಂದಿ ಬಾಬು ಎಂಬವರನ್ನು ಗ್ರಾಪಂ ಆಡಳಿತ ಅಮಾನತುಗೊಳಿಸಿದೆ.ಪಂಚಾಯತ್ ಸಿಬ್ಬಂದಿಯಾಗಿರುವ ಬಾಬು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ಗೆ ಪಾವತಿಸದೆ ದುರುಪಯೋಗ ಮಾಡಿದ್ದಾರೆ.ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಾಬುರನ್ನು ವಿಚಾರಿಸಿದಾಗ ಹಣ ದುರುಪಯೋಗ ಮಾಡಿದನ್ನು ಒಪ್ಪಿಕೊಂಡಿದ್ದಾರೆ. ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿ ಹಾಗೂ ಹಣ ದುರುಪಯೋಗದ ಕುರಿತು ಪೊಲೀಸ್ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

