Breaking News

ಹಣ ಪಣಕ್ಕಿಟ್ಟು ಜುಗಾರಿ; ಐವರ ವಿರುದ್ಧ ಪ್ರಕರಣ

ಮಂಗಳೂರು: ಪದವು ಗ್ರಾಮ ಶಕ್ತಿನಗರದ ಸಾರ್ವಜನಿಕ ಖಾಲಿ ಜಾಗದಲ್ಲಿ ಇಸ್ಪಿಟ್ ಎಲೆಗಳನ್ನು ಬಳಸಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ ಐವರು ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಧಿತರಿಂದ 4,200 ರೂ.ನಗದು ಮತ್ತು ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಶಕ್ತಿನಗರ ನಿವಾಸಿಗಳಾದ ಅರುಣ್ ಲೋಬೋ (49), ಸೆಬೆಸ್ಟಿಯನ್ ಲೋಬೋ (45), ಸ್ಟ್ಯಾನಿ ವಾಲ್ಟರ್ ಲೋಬೊ (50), ರವಿ ಕಿರಣ್ (35) ಮತ್ತು ಪಡುಶೆಡ್ಡೆ ಪಚ್ಚನಾಡಿ ನಿವಾಸಿ ಅಶೋಕ (40) ಬಂಧಿತ ಆರೋಪಿಗಳು. ಜುಗಾರಿ ಆಟದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ರವಿವಾರ ಸಂಜೆ 6.30ಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆಟ ಆಡುತ್ತಿರುವವರು ತಪ್ಪಿಕೊಂಡಿದ್ದು, ಸಿಬಂದಿ ಅವರನ್ನು ಸುತ್ತುವರಿದು ಬಂಧಿಸಿದ್ದಾರೆ. ಪಂಚರ ಮೂಲಕ ನಗದು ಸಹಿತ ಸೊತ್ತುಗಳನ್ನು ಮಹಜರು ಮಾಡಿ ವಶಪಡಿಸಿಕೊಂಡಿದ್ದಾರೆ.

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *