Breaking News

ಎಣ್ಣೆ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ವಿಡಿಯೋ ಮಾಡಿದ್ದ ಆರೋಪಿ ಅರೆಸ್ಟ್

ಹಾಸನ :ಡಿಸೆಂಬರ್ 8ರಂದು ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಉಲ್ಲಾಸ್ ತನ್ನ ಸ್ನೇಹಿತ ಕೀರ್ತಿಯನ್ನು ಕೊಲೆಗೈದಿದ್ದ.ಇಬ್ಬರೂ ಆಟೋ ಚಾಲಕರು, ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಮದ್ಯಪಾನ ವೇಳೆ ಜಗಳವಾಗಿ, ಕೀರ್ತಿ ಉಲ್ಲಾಸ್ ಕೆನ್ನೆಗೆ ಬಾರಿಸಿದ್ದ. ಇದರಿಂದ ಕೋಪಗೊಂಡ ಉಲ್ಲಾಸ್, ಮತ್ತೆ ಕುಡಿಯಲು ಇನ್ನಿಬ್ಬರೊಂದಿಗೆ ಕೀರ್ತಿಯನ್ನು ಆಟೋದಲ್ಲಿ ಕರೆದೊಯ್ದಿದ್ದ. ನಂತರ ಜಗಳ ಹೆಚ್ಚಾಗಿ, ಕಲ್ಲಿನಿಂದ ಕೀರ್ತಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದ. ಮತ್ತಿನ ನಶೆಯಲ್ಲಿ ಶವದ ಬಳಿ ನಿಂತು ಸೆಲ್ಫಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಪ್ರಸ್ತುತ ಉಲ್ಲಾಸ್ ಅರೆಸ್ಟ್ ಆಗಿದ್ದು, ಘಟನೆಯಲ್ಲಿ ಪಾತ್ರ ಹೊಂದಿದ್ದ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *