ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ವಿಟ್ಲಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿ ಅವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದು ಸ್ಥಳಕ್ಕೆ ದಾಳಿ ನಡೆಸಿದಾಗ, ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಕಂಡುಬಂದಿದೆ. ಪೊಲೀಸರು ಬಂದಿರುವುದನ್ನು ಕಂಡು ಕೆಲವರು ಓಡಿ ಹೋಗಿದ್ದು, ಮಹೇಶ್, ಬಾಬು, ಆನಂದ ಹಾಗೂ ಅಣ್ಣು ಎಂಬ ನಾಲ್ವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಅಲ್ಲಿ ನಗದು ರೂಪಾಯಿ 4390 ಮತ್ತು 8 ಹುಂಜಗಳ ಅಂದಾಜು ಮೌಲ್ಯ ಒಟ್ಟು 4550/- ರೂ, 10 ಕೋಳಿ ಬಾಳುಗಳ ಅಂದಾಜು ಮೌಲ್ಯ ಒಟ್ಟು 500/- ರೂ.ಗಳನ್ನು ಮಹಜರು ಮಾಡಿ ಸ್ವಾಧೀನಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

