Breaking News

ಸಂಬಂಧಿಯಿಂದಲೇ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಕಿರಾತಕ

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕುಟುಂಬದೊಂದಿದೆ 7 ವರ್ಷದ ಬಾಲಕಿ ಮನೆಯಲ್ಲಿ ನಿದ್ರೆಗೆ ಜಾರಿದ್ದಳು. ಸಂಬಂಧಿಕನೇ ಆಗಿರುವ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆ ಮನೆಯಿಂದ ಅಪಹರಿಸಿದ್ದಾನೆ. ಮಲಗಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿದ್ದು, ಸಮೀಪವೇ ಇರುವ ಇಂದಿರಾ ಸಾಗರ್ ಕಾಲುವೆಬಳಿ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಬಾಲಕಿ ಕುರುಚಾಡುತ್ತಿದ್ದಂತೆ ಆಕೆಯನ್ನು ಹೊಡೆದು ಕಾಲುವೆಗೆ ಎಸೆದು ಎಸ್ಕೇಪ್ ಆಗಿದ್ದಾನೆ. ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಜನವರಿ 26ರಂದು ಬೆಳಿಗ್ಗೆ ಸ್ಥಳಿಯರು ಬಾಲಕಿಯೊಬ್ಬಳ ಶವ ಕಾಲುವೆಯಲ್ಲಿ ಪತ್ತೆಯಾಗಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಮೇಲೆ ಗಾಯಗಳಾಗಿದ್ದವು, ನೀರಿನಲ್ಲಿ ಮುಳುಗಿದ್ದರಿಂದ ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣ ಸಂಬಂಧ 17 ವರ್ಷದ ಅಪ್ರಾಪ್ತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *