ನಗರದ ವಿವಿಧೆಡೆ ಬುಧವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಾಜಿ ರಸ್ತೆ ನಾಲೆ ಬಳಿ ತಹಶೀಲ್ದಾರ್ ಗಲ್ಲಿಯ ವಿನಾಯಕ ಸಾಂಬ್ರೇಕರ(39) ಎಂಬಾತನನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹1,020 ನಗದು ವಶಕ್ಕೆ ಪಡೆಯಲಾಗಿದೆ. ವಡಗಾವಿಯ ಮಲಪ್ರಭಾ ನಗರದಲ್ಲಿ ಅದೇ ಪ್ರದೇಶದ ಮಲ್ಲಿಕಾರ್ಜುನ ಕಾಂಬಳೆ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿ, ₹1,250 ನಗದು ವಶಕ್ಕೆ ಪಡೆದಿದ್ದಾರೆ. ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಕಾಕತಿಯ ಆಸಿಫ್ ಶೇಖ್, ಆರೀಫ್ ಷಾಪುರಿ, ಖಾಸಬಾಗದ ಟೀಚರ್ಸ್ ಕಾಲೊನಿಯ ಸುನೀಲ ಜಾಧವ ಎಂಬುವವರನ್ನು
ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,790 ನಗದು ವಶಕ್ಕೆ ಪಡೆಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

