Breaking News

ವೃದ್ದೆಯ ಚಿನ್ನದ ಸರ ಎಗರಿಸಿದ ಖದೀಮ

ತುಮಕೂರು: ಕಳ್ಳನೊಬ್ಬ ಗ್ರಾಹಕನ ಸೋಗಿನಲ್ಲಿ ಬಂದು ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರವನ್ನು ಎಗರಿಸಿಕೊಂಡು ಹೋಗಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರದ ಮೈದಾಳ ರಸ್ತೆಯಲ್ಲಿ ನಡೆದಿದೆ. ಕಳ್ಳತನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಫೆಬ್ರವರಿ 15 ರಂದು ಬೆಳಗ್ಗಿನ ಜಾವ ನಡೆದಿದೆ. ಚಿಲ್ಲರೆ ಅಂಗಡಿ ನಡೆಸುತಿದ್ದ ಪಾರ್ವತಮ್ಮ ಅವರ ಚಿನ್ನದ ಸರವನ್ನು ಕಿತ್ತುಕೊಂಡು ಖದೀಮ ಸ್ಥಳದಿಂದ ಪರಾರಿಯಾಗಿದ್ದಾನೆ. ಪಾರ್ವತಮ್ಮ ಬೆಳಗ್ಗೆ 6:30ಕ್ಕೆ ಅಂಗಡಿ ಬಾಗಿಲು ತೆರೆದಿದ್ದರು. ಆಗ ಸ್ಥಳದಲ್ಲಿ ಅಷ್ಟಾಗಿ ಜನಸಂಚಾರ ಇರಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ಬಂದ ಖದೀಮ ಚಿನ್ನದ ಸರವನ್ನು ಎಗರಿಸಿದ್ದಾನೆ. ವೃದ್ಧೆಯ ಬಳಿ ಅಂಗಡಿಯಲ್ಲಿ ಗುಟ್ಕಾ ಕೇಳುವ ನೆಪದಲ್ಲಿ ಬಂದ ಖದೀಮ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಎಳೆದು ಪರಾರಿಯಾಗಿದ್ದಾನೆ. ಸರವನ್ನು ಕೈಹಾಕಿ ಎಳೆದ ರಭಸಕ್ಕೆ ತುಂಡಾಗಿ ಬಿದ್ದಿದೆ. ತನ್ನ ಕೈಗೆ ಸಿಕ್ಕ ಅರ್ಧ ಸರವನ್ನು ಖದೀಮ ಹಿಡಿದುಕೊಂಡು ಕಾಲ್ಕಿತ್ತಿದ್ದಾನೆ. ಕಳ್ಳ ದಾಳಿ ಮಾಡುತಿದ್ದಂತೆ‌ ವೃದ್ಧೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಬಿದ್ದು ಒದ್ದಾಡಿದರೂ ಕಳ್ಳ ಸರವನ್ನು ಬಿಡದೆ ಓಡಿದ್ದಾನೆ. ಇದೆಲ್ಲಾ ದೃಶ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ಕಳ್ಳನ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *