ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕೆಗೆ ನೈರ್ಮಲ್ಯ ನಿರೀಕ್ಷಕ ಲೈಂಗಿಕ ಕಿರುಕುಳ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಕಂಕನಾಡಿಯ ವಾರ್ಡ್‌ನಲ್ಲಿ ಖಾಯಂ ಪೌರ ಕಾರ್ಮಿಕೆಯಾಗಿದ್ದು, 10 ದಿನ ರಜೆ ಬೇಕು ಎಂದು ಮನಪಾ ನೈರ್ಮಲ್ಯ ನಿರೀಕ್ಷಕ ಭಾಸ್ಕರ ಎಂಬಾತನ ಬಳಿ ಕೇಳಿದಾಗ 2025ರ ಜೂ.22ರಂದು ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ತಿಳಿಸಿದ್ದು, ಅದರಂತೆ ಆ ದಿನ ತಾನು ಕಚೇರಿಗೆ ಹೋದಾಗ ನನ್ನ ಕೈಗೆ 1 ಸಾವಿರ ರೂ.ತುರುಕಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಸಂತು ನಾಯ್ಕ ಎಂಬಾತ ನೋಡಿದ ಕೂಡಲೆ ತನ್ನನ್ನು ಬಿಟ್ಟಿದ್ದಾನೆ. ಆ ಬಳಿಕ ತನ್ನನ್ನು ಬೇರೆ ಬೇರೆ ಕಡೆ ಕರೆದಿದ್ದು, ಕೆಲಸ ಮಾಡುವಲ್ಲಿಗೂ ಬಂದು ಕಿರುಕುಳ ನೀಡಿದ್ದಾನೆ. ನಂತರ ಇತರ ಕಾರ್ಮಿಕರ ಸಮ್ಮುಖ ನನಗೆ ಅವಾಚ್ಯ ಶಬ್ದದಿಂದ ಬೈದು, ರಜೆ ಮಾಡಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಸಿದ್ದಾನೆ ಎಂದು 38ರ ಹರೆಯದ ಪೌರ ಕಾರ್ಮಿಕೆ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

