Breaking News

ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಜಗಳ: ತಮ್ಮನನ್ನೇ ಕೊಲೆಗೈದ ಅಣ್ಣ

ಬೆಳಗಾವಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಜಮೀನಿಗೆ ನೀರು ಹರಿಸುವ ವಿಚಾರವಾಗಿ ಅಣ್ಣ-ತಮ್ಮನ ನಡುವೆ ನಡೆದ ಗಲಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಣ್ಣ-ತಮ್ಮನ ನಡುವೆ ಜಗಳವಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾಗಿರುವ ವ್ಯಕ್ತಿ. ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ತಮ್ಮನನ್ನೇ ಕೊಂದ ಅಣ್ಣ, ತಮ್ಮನ ಜೊತೆ ಜಗಳ ಮಾಡಿದ್ದ ಮಹಾದೇವಪ್ಪ, ಕೈಯಲ್ಲಿದ್ದ ಸಲಿಕೆಯಿಂದ ಹೋಡೆದು ಕೊಲೆ ಮಾಡಿದ್ದಾನೆ. ಮುರಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಮುರಗೋಡ ಪೊಲೀಸರು ಆರೋಪಿ ಮಹಾದೇವಪ್ಪನನ್ನು ಬಂಧಿಸಿದ್ದಾರೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *