ಬೆಂಗಳೂರು: ತರಬೇತಿ ನಿರತ ಗಗನಸಖಿಗೆ ಪ್ರೀತಿಸುವಂತೆ ದುಂಬಾಲು ಬಿದ್ದು ಕಿರುಕುಳ ನೀಡುತ್ತಿದ್ದ ಯುವಕನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್‌ಬಂಧಿತ. ಚಂದ್ರಶೇಖರ್ ಹಾಗೂ ಸಂತ್ರಸ್ತೆ ಪರಿಚಿತರಾಗಿದ್ದು, ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು. ಯುವತಿಯು ತರಬೇತಿ ನಿರತ ಗಗನಸಖೀಯಾಗಿದ್ದಳು. ಆರಂಭದಲ್ಲಿ ಇಬ್ಬರು ಸ್ನೇಹಿತರಾಗಿದ್ದರು. ಇತ್ತೀಚೆಗೆ ಆರೋಪಿ ಚಂದ್ರಶೇಖರ್ ಪ್ರೀತಿಸುವಂತೆ ಯುವತಿಯ ಹಿಂದೆ ದುಂಬಾಲು ಬಿದ್ದಿದ್ದ. ಯುವಕನ ವರ್ತನೆಯಿಂದ ಬೇಸತ್ತಿದ್ದ ಯುವತಿ ಆತನನ್ನು ನಿರ್ಲಕ್ಷಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು, ಆಕೆ ಕಾಲೇಜಿಗೆ ಹೋಗುವಾಗ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಹಿಂಬಾಲಿಸಿಕೊಂಡು ಕಿರುಕುಳ ನೀಡುತ್ತಿದ್ದ. ಇತ್ತೀಚೆಗೆ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಸಾರ್ವಜನಿಕ ಸ್ಥಳದಲ್ಲೇ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ನೊಂದ ಯುವತಿ, ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

