Breaking News

ಕುಂದಾಪುರ: ಸೇತುವೆ ಮೇಲೆ ಯುವಕರ ಮೋಜು ಮಸ್ತಿ ಗಲಾಟೆ; ನಾಲ್ವರು ಅರೆಸ್ಟ್

ಕುಂದಾಪುರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಶಾಂತಿಗೆ ಭಂಗ ಉಂಟುಮಾಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಕಸಬಾ ಗ್ರಾಮದ ನವೀನ್, ಕೋಡಿ ಕಸಬಾ ಗ್ರಾಮದ ಪ್ರಶಾಂತ್, ಹಂಗಳೂರು ಗ್ರಾಮದ ವಿಘ್ನೇಶ್ ಹಾಗೂ ಗಣೇಶ್ ಬಂಧಿತ ಆರೋಪಿಗಳು. ಮಹೇಶ್, ನಿಶಾಂತ್ ಸೇರಿದಂತೆ ಇತರರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರಾತ್ರಿ ರೌಂಡ್ಸ್ ವೇಳೆ ಚರ್ಚ್ ರೋಡ್‌ನಿಂದ ಕೋಡಿಗೆ ಸಂಪರ್ಕಿಸುವ ಸೇತುವೆ ಮೇಲೆ ಕೆಲವರು ಜೋರಾಗಿ ಜಗಳವಾಡುತ್ತಾ, ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು, BNS 194(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಶಾಸಕ ಸುನಿಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಕಾಂಗ್ರೆಸ್ ಕಾರ್ಯಕರ್ತ ವಶಕ್ಕೆ

ಉಡುಪಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ …

Leave a Reply

Your email address will not be published. Required fields are marked *