Breaking News

ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಗಿದ್ದೇ ತಪ್ಪಾಯ್ತು, ಚಿನ್ನ ಕದ್ದಳೆಂದ ಆರೋಪ ಬಡಪಾಯಿ ನೀಲವ್ವಗೆ ಪೊಲೀಸರಿಂದ ಕರೆಂಟ್ ಶಾಕ್!

ಹಾವೇರಿ: ದೇವರ ಮೇಲಿನ ಚಿನ್ನ ಕಳವು ಆರೋಪದ ವಿಚಾರಣೆ ವೇಳೆ ಬಡ ಮಹಿಳೆಗೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಗ್ಗಾವಿ ತಾಲೂಕಿನ ಶಿಡ್ಲಾಪುರ ಗ್ರಾಮದ ನೀಲವ್ವ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಪಕ್ಕದ ಮನೆಯ ಪೂಜೆಗೆ ನೀಲವ್ವ ಸೇರಿದಂತೆ ಹಲವು ಮಹಿಳೆಯರು ತೆರಳಿದ್ದರು. ಈ ವೇಳೆ ದೇವರ ಮೇಲಿದ್ದ ಚಿನ್ನ ಕಳುವಾಗಿದ್ದು, ನೀಲವ್ವ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಚಿನ್ನ ಕದ್ದಿರುವುದಾಗಿ ಒಪ್ಪಿಕೊಳ್ಳುವಂತೆ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸೆ ನೀಡಿದ್ದಾರೆ ಎಂದು ನೀಲವ್ವ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ತಾನು ಚಿನ್ನ ಕದ್ದಿಲ್ಲ ಎಂದು ನೀಲವ್ವ ಕಣ್ಣೀರಿಟ್ಟಿದ್ದಾರೆ.

Share News

About BigTv News

Check Also

ಶಾಸಕ ಸುನಿಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಕಾಂಗ್ರೆಸ್ ಕಾರ್ಯಕರ್ತ ವಶಕ್ಕೆ

ಉಡುಪಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ …

Leave a Reply

Your email address will not be published. Required fields are marked *