Breaking News

ಜಾತಿನಿಂದನೆ ಕಿರುಕುಳ; 10 ಲಕ್ಷಕ್ಕೆ ಬೇಡಿಕೆ ಹಣ್ಣಿನ ವ್ಯಾಪಾರಿ ಆತ್ಮಹತ್ಯೆ

ಬೆಂಗಳೂರು-ವಿನಾಕಾರಣ ನನ್ನ ಮೇಲೆ ಜಾತಿನಿಂದನೆ ದೂರು ನೀಡಲಾಗಿದೆ. ಅಲ್ಲದೇ ಮಹಿಳೆಯೊಬ್ಬರು 10 ಲಕ್ಷಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹಣ್ಣಿನ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚನ್ನಸಂದ್ರದ ಎಕೆಜಿ ಬಡಾವಣೆ ನಿವಾಸಿ ಪಾಪಣ್ಣ (40) ಆತಹತ್ಯೆ ಮಾಡಿಕೊಂಡಿರುವ ಹಣ್ಣಿನ ವ್ಯಾಪಾರಿ. 2021 ರಲ್ಲಿ ಇದೇ ಬಡಾವಣೆಯ ನಿವಾಸಿಯೊಬ್ಬರು ಪಾಪಣ್ಣ ಅವರ ಮೇಲೆ ಅಟ್ರಾಸಿಟಿ ಕೇಸ್‌‍ (ಜಾತಿನಿಂದನೆ ಪ್ರಕರಣ) ನೀಡಿದ್ದರು. ವಿನಾಕಾರಣ ಸುಳ್ಳು ದೂರು ನೀಡಿ ಕಿರುಕುಳ ನೀಡುತ್ತಿದ್ದರಿಂದ ಪಾಪಣ್ಣ ಅವರು ಮನನೊಂದಿದ್ದರು. ಈ ನಡುವೆ ಊರಿನ ಜಾತ್ರೆ ನಿಮಿತ್ತ ಪಾಪಣ್ಣ ಅವರು ಕುಟುಂಬದೊಂದಿಗೆ ಹೋಗಿದ್ದಾಗ ದೂರು ನೀಡಿದ್ದವರ ಜೊತೆ ಮತ್ತೆ ಜಗಳವಾಗಿದೆ. ಆ ಸಂದರ್ಭದಲ್ಲಿ ನಯನ ಎಂಬ ಮಹಿಳೆ ಸುಳ್ಳು ಅಟ್ರಾಸಿಟಿ ಕೇಸ್‌‍ ದಾಖಲು ಮಾಡಿಸಿ 10 ಲಕ್ಷ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಪಾಪಣ್ಣ ಅವರು ಈ ಎಲ್ಲಾ ವಿಚಾರವನ್ನು ವಿಡಿಯೋ ಮಾಡಿಟ್ಟು ನನ್ನ ಕುಟುಂಬವನ್ನು ಹಾಗೂ ತಂಗಿಯನ್ನು ಕಾಪಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋದಲ್ಲಿರುವ ಮಾಹಿತಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *