Breaking News

ದಾವಣಗೆರೆಯಲ್ಲಿ ಜಿಮ್ ಜಿಹಾದ್ ಕೇಸ್ ಗೆ ಟ್ವಿಸ್ಟ್: ಲವ್ ಜಿಹಾದ್ ಅಲ್ಲ, ಇದು ಬರೀ ಹಣಕ್ಕಾಗಿ ನಡೆದ ಆಟ ಎಂಬ ಸ್ಫೋಟಕ ಆರೋಪ ಮಾಡಿದ ಇಸ್ಮಾಯಿಲ್ ತಾಯಿ!

ದಾವಣಗೆರೆ: ‘ಪವರ್ ಫಿಟ್ನೆಸ್’ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧದ ಆರೋಪಗಳಿಗೆ ಹೊಸ ತಿರುವು ಸಿಕ್ಕಿದ್ದು, ಆತನ ತಾಯಿ ಇಡೀ ಪ್ರಕರಣವು ಮಹಿಳೆ ಹಾಗೂ ಆಕೆಯ ಪತಿ ನಡೆಸಿದ ‘ಹನಿಟ್ರ್ಯಾಪ್’ ಎಂದು ಆರೋಪಿಸಿದ್ದಾರೆ. ಹಣಕ್ಕಾಗಿ ಮೊದಲು ₹4 ಲಕ್ಷ ಪಡೆದು, ಬಳಿಕ ₹15 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇಸ್ಮಾಯಿಲ್‌ಗೆ ಒಬ್ಬ ಮಹಿಳೆಯೊಂದಿಗೆ ಸಂಬಂಧ ಇದ್ದದ್ದು ನಿಜ, ಆದರೆ 12ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿದ ಆರೋಪ ಸುಳ್ಳು ಎಂದು ಅವರು ಹೇಳಿದ್ದಾರೆ. ಪುತ್ರನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಮೊಬೈಲ್ ಸಂದೇಶಗಳು, ಆಡಿಯೋ ಹಾಗೂ ಇತರ ಸಾಕ್ಷ್ಯಗಳು ತಮ್ಮ ಬಳಿ ಇದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇಸ್ಮಾಯಿಲ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ, ಆದರೆ ಸುಳ್ಳು ಆರೋಪಗಳಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಕರಣದ ಎಲ್ಲಾ ಆಯಾಮಗಳನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *