Breaking News

ಪ್ರೊಬೇಷನರಿ ಪಿಎಸ್‌ಐ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಪ್ರಕರಣ: ಆರೋಪಿ ಬಂಧನ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೊರೆನಾಯ್ಕ್ ಪಿ.ಆರ್. ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದೆ. ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ದಾವಣಗೆರೆಯ ಯುವತಿ ಚಂದು ಅವರನ್ನು ವಿವಾಹವಾಗಿದ್ದ ಆರೋಪವೂ ಕೇಳಿಬಂದಿದೆ. ಮದುವೆಯ ಬಳಿಕ ಅರಳಿಹಳ್ಳಿಯಲ್ಲಿ ವಾಸವಿದ್ದ ದಂಪತಿಗಳ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳಗಳು ನಡೆದಿದ್ದು, 10 ಲಕ್ಷ ರೂ. ತರುವಂತೆ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳವಾರ ರಾತ್ರಿ ಪತ್ನಿಯ ಕುತ್ತಿಗೆಗೆ ವೈರ್‌ ಅಥವಾ ಬಟ್ಟೆ ಬಿಗಿದು ಫ್ಯಾನ್‌ಗೆ ನೇಣು ಹಾಕಲು ಯತ್ನಿಸಿದ ಆರೋಪವೂ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡ ಚಂದು ಅವರನ್ನು ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತೆಯ ಪೋಷಕರ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಿಪಿಐ ವಿಕಾಸ ಲಮಾಣಿ ನೇತೃತ್ವದ ತಂಡ ಆರೋಪಿ ಪ್ರೊಬೇಷನರಿ ಪಿಎಸ್‌ಐ ದೊರೆನಾಯ್ಕ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Share News

About BigTv News

Check Also

ರಾಯಚೂರು: ಸಾಲಕ್ಕೆ ಸಿಗರೇಟ್‌ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!

ರಾಯಚೂರು: ಸಾಲವಾಗಿ ಸಿಗರೇಟ್ ನೀಡದ ವಿಚಾರಕ್ಕೆ ಟೀ ಸ್ಟಾಲ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಎಲ್‌ಬಿಎಸ್ …

Leave a Reply

Your email address will not be published. Required fields are marked *