Breaking News

ಸಂಪ್‌ ವಿಚಾರಕ್ಕೆ ಗಲಾಟೆ : ಮರ್ಮಾಂಗಕ್ಕೆ ಒದ್ದು ಪ್ಲಂಬರ್‌ ಕೊಲೆ

ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ನೀರಿನ ಸಂಪ್‌ ನಿರ್ಮಾಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಆಂಧ್ರಪ್ರದೇಶ ಮೂಲದ 38 ವರ್ಷದ ರವಿ ಎಂಬ ಪ್ಲಂಬರ್‌ ಹಾಗೂ ಗಾರೆ ಕೆಲಸಗಾರ ಹಲ್ಲೆಯಿಂದ ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಮನೆಯ ಸಂಪ್‌ಗೆ ಹಾಳಾದ ಮುಚ್ಚುಳ ಅಳವಡಿಸಿರುವ ವಿಚಾರವಾಗಿ ಮನೆ ಮಾಲೀಕ ದೇವರಾಜ್‌ ಮತ್ತು ಗಾರೆ ಮೇಸಿ ಮಂಜುನಾಥ್ ನಡುವೆ ವಾಗ್ವಾದ ನಡೆದಿದೆ. ಬಳಿಕ ದೇವರಾಜ್‌ ತನ್ನವರೊಂದಿಗೆ ಮಂಜುನಾಥ್ ಮನೆಗೆ ತೆರಳಿ ಗಲಾಟೆ ನಡೆಸಿದ ವೇಳೆ ಜಗಳ ಬಿಡಿಸಲು ಬಂದ ರವಿ ಮೇಲೆ ಹಲ್ಲೆ ನಡೆಸಿ ಮರ್ಮಾಂಗಕ್ಕೆ ಒದ್ದಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ರವಿ ಮೃತಪಟ್ಟಿದ್ದು, ಮಂಜುನಾಥ್‌ ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಮುಂದಿನ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *