Breaking News

ಬೀದರ್‌ನ SBI ಎಟಿಎಂ ಲೂಟಿ: ಬಿಹಾರದಲ್ಲಿ ದರೋಡೆಕೋರರ ಸೆರೆ; ಪಟಾಕಿ ಸಿಡಿಸಿ ಸಂಭ್ರಮ

ಬೀದರ್‌: ನಗರದ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣವನ್ನು ಬೀದರ್‌ ಜಿಲ್ಲಾ ಪೊಲೀಸರು 20 ತಿಂಗಳ ಬಳಿಕ ಭೇದಿಸಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ದಾಮೋದರ್‌ ಗ್ರಾಮದಲ್ಲಿ ಅಮನ್‌ಕುಮಾರ್‌ ಸಿಂಗ್‌ ಹಾಗೂ ಅಲೋಕ್‌ ಕುಮಾರ್‌ ಎಂಬ ಆರೋಪಿಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಎಸ್‌ಪಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ 20 ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 2025ರ ಜನವರಿ 16ರಂದು ಎಸ್‌ಬಿಐ ಎಟಿಎಂ ಬಳಿ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳು ₹83 ಲಕ್ಷ ನಗದಿದ್ದ ಟ್ರಂಕ್‌ ಅನ್ನು ಬೈಕ್‌ನಲ್ಲಿ ಹೊತ್ತೊಯ್ದಿದ್ದರು. ಘಟನೆಯಲ್ಲಿ ಕ್ಯಾಶ್‌ ಕಸ್ಟೋಡಿಯನ್‌ ಗಿರಿ ವೆಂಕಟೇಶ್‌ ಮೃತಪಟ್ಟಿದ್ದು, ಶಿವಕುಮಾರ್‌ ಗಂಭೀರವಾಗಿ ಗಾಯಗೊಂಡಿದ್ದರು.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *