ಮೀಸಲಾತಿ ಹಾಗೂ ಅದರ ಫಲಾನುಭವಿಗಳ ಕುರಿತು ಅವಹೇಳನಕಾರಿ ಮತ್ತು ಸಮಾಜದಲ್ಲಿ ದ್ವೇಷ, ವಿಭಜನೆಗೆ ಕಾರಣವಾಗುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಖಾಸಗಿ ವಾಹಿನಿಯ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅವರು ಮೀಸಲಾತಿ ಕುರಿತು ಪೂರ್ವಾಗ್ರಹಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೆಲಮಂಗಲ ನಿವಾಸಿ ಅನಂತಕುಮಾರ್ ಡಿ.ಆರ್. ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಅರುಣ್ ಬಡಿಗೇರ್ ಹಾಗೂ ಖಾಸಗಿ ವಾಹಿನಿಯ ಆಡಳಿತ ಮಂಡಳಿ ವಿರುದ್ಧ ಬಿಎನ್‌ಎಸ್‌ನ 196(1), 353(1), 353(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

