ಮೈಸೂರು: ಮೃತ ಗ್ರಾಹಕನ ಖಾತೆ ಸೇರಿದಂತೆ ಬ್ಯಾಂಕಿನ ಆಂತರಿಕ ಖಾತೆಯಿಂದ ₹61.57 ಲಕ್ಷ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಚಾಮುಂಡಿಪುರಂ ಎಸ್ಬಿಐ ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗಿದೆ. 2009ರಿಂದ 2011ರ ಅವಧಿಯಲ್ಲಿ ಕುಲಕರ್ಣಿ, 2005ರಲ್ಲೇ ಮೃತಪಟ್ಟಿದ್ದ ಕೃಷ್ಣ ಅಯ್ಯರ್ ಅವರ ಖಾತೆಯಲ್ಲಿದ್ದ ₹40.53 ಲಕ್ಷ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಲ್ಲಿದ್ದ ₹21.04 ಲಕ್ಷವನ್ನು ತಮ್ಮ ಹಾಗೂ ಮಗನ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಡ್ರಾ ಮಾಡಿದ್ದರು. ಬ್ಯಾಂಕ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಹಣವನ್ನು ಹಿಂತಿರುಗಿಸಿದ್ದರು. ಬಳಿಕ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿ. ಪ್ರಕಾಶ್ ಶಿಕ್ಷೆ ವಿಧಿಸಿದ್ದು, ದಂಡದ ₹40 ಸಾವಿರವನ್ನು ಬ್ಯಾಂಕಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

