Breaking News

ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡಿ ರೇಣುಕಾಸ್ವಾಮಿಯಂತೆ ಕಾಲುವೆ ಪಕ್ಕದಲ್ಲಿ ಬೀದಿ ಹೆಣವಾದ ಬಸವನಗೌಡ!

ಬಳ್ಳಾರಿಯಲ್ಲಿ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಮಹಿಳೆ, ಆಕೆಯ ಪತಿ ಹಾಗೂ ಸಹೋದರ ಸೇರಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ನಿರ್ಜನ ಪ್ರದೇಶಕ್ಕೆ ಸಾಗಿಸಿ ಪೆಟ್ರೋಲ್ ಸುರಿದು ಸುಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಟೀಲ್ ಬಸವನಗೌಡ (26) ಜೂನ್ 7ರಂದು ನಾಪತ್ತೆಯಾಗಿದ್ದು, ಮರುದಿನ ಎಲ್‌ಎಲ್‌ಸಿ ಕಾಲುವೆ ಬಳಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ತನಿಖೆಯಲ್ಲಿ, ಮಹಿಳೆಗೆ ಕಳೆದ ಒಂದು ವರ್ಷದಿಂದ ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ವಿಚಾರ ಬಹಿರಂಗವಾಗಿದೆ. ಮೊಬೈಲ್ ಕರೆಗಳ ವಿವರ ಆಧರಿಸಿ ತನಿಖೆ ನಡೆಸಿದ ಮೋಕಾ ಠಾಣೆ ಪೊಲೀಸರು ಶ್ವೇತಾ, ಆಕೆಯ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್ ಅವರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *