ಉಡುಪಿಯಲ್ಲಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವಾಟ್ಸಾಪ್ ಮೂಲಕ APK ಫೈಲ್ ಮತ್ತು ಲಿಂಕ್ ಕಳುಹಿಸಿ KYC ಅಪ್ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಸೈಬರ್ ಕಳ್ಳರು ₹17.50 ಲಕ್ಷ ದೋಚಿದ್ದಾರೆ. ಸೌತ್ ಇಂಡಿಯನ್ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವಂಚಕನ ಮಾತು ನಂಬಿದ ಅಜಯ್ ಜಗದೀಶ್ ಅವರು ಲಿಂಕ್ ತೆರೆದು ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿಯನ್ನು ನೀಡಿದ್ದಾರೆ. ನಂತರ ದೈನಂದಿನ ವಹಿವಾಟಿನ ಮಿತಿ ಹೆಚ್ಚಿಸಲು ಹಣ ವರ್ಗಾವಣೆ ಮಾಡಬೇಕೆಂದು ನಂಬಿಸಿ, ಅವರ ICICI ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಳ್ಳಲಾಗಿದೆ. ಸೆಪ್ಟೆಂಬರ್ 2ರಂದು ಹಂತ ಹಂತವಾಗಿ ವಿವಿಧ ಅಪರಿಚಿತ ಖಾತೆಗಳಿಗೆ ಒಟ್ಟು ₹17.50 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಂಚನೆಗೊಳಗಾಗಿರುವುದು ತಿಳಿದ ಬಳಿಕ ಅಜಯ್ ಅವರು ಉಡುಪಿ CEN ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಡಿ IT Act 66(D) ಹಾಗೂ BNS 319(2), 318(4) ಅಡಿಯಲ್ಲಿ FIR ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

