Breaking News

ವಿಜಿಗೆ ತೀರದ ಸಂಕಷ್ಟ, ಡಿಸಿಪಿ ಅಣ್ಣಾಮಲೈಯಿಂದ ವಿಚಾರಣೆ..!

ಬೆಂಗಳೂರು: ಪತ್ನಿಯರ ಗಲಾಟೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​​​ಗೆ ಇನ್ನೂ ಸಂಕಷ್ಟ ತೀರಿಲ್ಲ. ದುನಿಯಾ ವಿಜಯ್​ ಪತ್ನಿ ನಾಗರತ್ನ ಹಾಗೂ ಕೀರ್ತಿ ಗೌಡ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ವಿಜಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ ದುನಿಯಾ ವಿಜಯ್​ ಹಾಗೂ ನಾಗರತ್ನ ವಿರುದ್ಧ ಸಿಆರ್​ಪಿಸಿ ಸೆಕ್ಷನ್ 107 ಹಾಕಲಾಗಿದೆ. ಸೆಕ್ಷನ್ ಹಾಕಿ ವಾರ ಕಳೆದರೂ ದುನಿಯಾ ವಿಜಯ್ ಬಂದು ಮುಚ್ಚಳಿಕೆ ಬರೆದು ಕೊಡದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್​ ನೀಡಿದ್ದಾರೆ.ದುನಿಯಾ ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ವಿಜಯ್ ಹಾಗೂ ನಾಗರತ್ನ ಎರಡೂ ಕಡೆಯವರ ಮೇಲೆ ಸೆಕ್ಷನ್ 107 ಹಾಕಲಾಗಿದೆ. ಈ ಬಗ್ಗೆ ಸ್ಥಳೀಯ ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಂದು ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ಮುಂದೆ ನಟ ದುನಿಯಾ ವಿಜಯ್ ಹಾಗೂ ಕುಟುಂಬಸ್ಥರು ಹಾಜರಾಗಬೇಕಿದೆ.

Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *