Breaking News

ಬಳ್ಳಾರಿಯಲ್ಲಿ ಘೋರ ದುರಂತ : ಇಬ್ಬರು ಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ!

ಬಳ್ಳಾರಿ: ನಗರದ ಮಿಲ್ಲರ್ ಪೇಟೆ ಕಾಲುವೆಗೆ ಇಬ್ಬರು ಮಕ್ಕಳೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಲತಿಫಾ ಸಿಮ್ರಾನ್ (29) ಹಾಗೂ ಮಕ್ಕಳಾದ ಮೊಹಮ್ಮದ್ ಅಯಾನ್ (3), ಆಯಿಷಾ ಫಾತಿಮಾ (2) ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಾಲುವೆಯಲ್ಲಿ ತಾಯಿ ಲತಿಫಾ ಸಿಮ್ರಾನ್ ಅವರ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆ ಕುರಿತು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಹಗಲೆಲ್ಲಾ ಹಳೆ ಪಾತ್ರೆ ಮಾರಾಟ – ಕತ್ತಲಲ್ಲಿ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

ಕೋಲಾರ: ಮುಳಬಾಗಿಲು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ತಿರುಪತ್ತೂರು ಮೂಲದ ಮುನಿರಾಜು, ಸತೀಶ್ ಕುಮಾರ್ ಮತ್ತು ಪೆರುಮಾಳ್ ಎಂಬ ಮೂವರು …

Leave a Reply

Your email address will not be published. Required fields are marked *