Breaking News

1 ಎಕರೆ ಆಸ್ತಿಗಾಗಿ ಚಿಕ್ಕಪ್ಪನಿಂದಲೇ ತಂದೆ-ತಾಯಿ ಇಲ್ಲದ 15 ವರ್ಷದ ಬಾಲಕನ ಕೊಲೆ: ಅಣ್ಣ ಪ್ರೇಮದ ಊರಲಿ ಚಿತ್ರ ನೋಡಲು ಹೋದಾಗ ಕೃತ್ಯ!

ಬೆಂಗಳೂರು: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ 15 ವರ್ಷದ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾ ಕಾಲೋನಿಯ ಕೃಷ್ಣ (15) ಕೊಲೆಯಾದ ಬಾಲಕ. ಆರೋಪಿ ಮೋಹನ್‌ (45)ನನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಜು ಅವರ ಪಿತ್ರಾರ್ಜಿತ ಒಂದು ಎಕರೆ ಜಮೀನಿನ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಜಮೀನು ಮಾರಾಟದ ಪ್ರಕ್ರಿಯೆಯಲ್ಲಿ ಅಣ್ಣನ ಮಕ್ಕಳಿಗೂ ಪಾಲು ಸಿಕ್ಕಿದ್ದರಿಂದ ದ್ವೇಷ ಬೆಳೆಸಿಕೊಂಡಿದ್ದ ಮೋಹನ್‌, ರಾತ್ರಿ ಮನೆಗೆ ನುಗ್ಗಿ ಮಲಗಿದ್ದ ಕೃಷ್ಣನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಆರೋಪಿ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಬಾಲಕನ ಮೃತದೇಹ ಪತ್ತೆಹಚ್ಚಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಹಗಲೆಲ್ಲಾ ಹಳೆ ಪಾತ್ರೆ ಮಾರಾಟ – ಕತ್ತಲಲ್ಲಿ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

ಕೋಲಾರ: ಮುಳಬಾಗಿಲು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನ ತಿರುಪತ್ತೂರು ಮೂಲದ ಮುನಿರಾಜು, ಸತೀಶ್ ಕುಮಾರ್ ಮತ್ತು ಪೆರುಮಾಳ್ ಎಂಬ ಮೂವರು …

Leave a Reply

Your email address will not be published. Required fields are marked *