ಹಗಲು ನಾಪತ್ತೆ, ಹಗಲು ಫೋನ್ ಸ್ವಿಚ್ ಆಫ್ ರಾತ್ರಿ ಫೋನ್ ಆನ್..! ವಿಡಿಯೋ–ಆಡಿಯೋ ದಾಖಲೆಗಳೊಂದಿಗೆ ವಂಚಕರ ಬಣ್ಣ ಬಯಲು..! ಮುಂದಿನ ವರದಿಯಲ್ಲಿ ಸ್ಫೋಟಕ ಬಹಿರಂಗ..!
ಹಗಲು ಫೋನ್ ಸ್ವಿಚ್ ಆಫ್, ರಾತ್ರಿ ಮಾತ್ರ ಆನ್..! ಚೀಟರ್ಗಳ ಬಣ್ಣ ಬಯಲು..!
ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವ ಹೆಸರಲ್ಲಿ ಹಣ ವಂಚನೆ ಆರೋಪ..! ಕಾರೂ ಇಲ್ಲ, ದುಡ್ಡೂ ಇಲ್ಲ..!
ಹುಬ್ಬಳ್ಳಿ: ಹೌದು ವೀಕ್ಷಕರೇ..! ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ನಂಬಿಸಿ ಹಣ ಪಡೆದು, ಕಾರನ್ನೂ ಕೊಡದೆ, ಹಣವನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎನ್ನಲಾದ ಚೀಟರ್ಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ…
ಕಷ್ಟಪಟ್ಟು ದುಡಿದ ಹಣ ನೀಡಿ ಕಾರಿನ ನಿರೀಕ್ಷೆಯಲ್ಲಿದ್ದ ಯುವಕರಿಗೆ ಈಗ ಕಾರೂ ಇಲ್ಲ, ಕೊಟ್ಟ ಹಣವೂ ಇಲ್ಲ ಎಂಬ ಸಂಕಷ್ಟ ಎದುರಾಗಿದೆ. ಹಣ ಪಡೆದ ಬಳಿಕ ಹಗಲಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ರಾತ್ರಿ ಮಾತ್ರ ಫೋನ್ ಆನ್ ಮಾಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ತಮ್ಮದೇ ಹಣವನ್ನು ಮರಳಿ ಪಡೆಯಲು ಯುವಕರು ಅಲೆದಾಡುವಂತಾಗಿದೆ ಎನ್ನಲಾಗಿದೆ…

ಹಣ ಪಡೆಯುವಾಗ ಭರವಸೆ, ಹಣ ವಾಪಸ್ ಕೇಳಿದಾಗ ನಾಪತ್ತೆ..! ಇಂಥ ಚೀಟರ್ಗಳ ಆಟಕ್ಕೆ ಕೊನೆ ಯಾವಾಗ? ಹಣ ಕೊಟ್ಟ ಯುವಕರಿಗೆ ನ್ಯಾಯ ಸಿಗುವುದು ಯಾವಾಗ..?
ಇಂಥ ಚೀಟರ್ಗಳ ಬಗ್ಗೆ ಎಚ್ಚರ..!
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ..! ಇಂಥ ಚೀಟರ್ಗಳ ಮಾತಿಗೆ ಮರುಳಾಗಿ ನಿಮ್ಮ ಕಷ್ಟದ ಹಣವನ್ನು ಕಳೆದುಕೊಳ್ಳಬೇಡಿ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ವಾಹನದ ದಾಖಲೆಗಳನ್ನು ಪರಿಶೀಲಿಸಿ, ಹಣ ಪಾವತಿಸುವಾಗ ರಸೀದಿ ಮತ್ತು ಲಿಖಿತ ಒಪ್ಪಂದ ಪಡೆದುಕೊಳ್ಳಿ…
ಪೊಲೀಸರೇ ಇತ್ತ ಗಮನಹರಿಸಿ..! ಚೀಟರ್ಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ..!
ಹುಬ್ಬಳ್ಳಿ–ಧಾರವಾಡದಲ್ಲಿ ಕಾರು ಕೊಡಿಸುವ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪಗಳ ಬಗ್ಗೆ ಪೊಲೀಸರು ತಕ್ಷಣ ತನಿಖೆ ನಡೆಸಬೇಕು. ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ವಂಚನೆ ದೃಢಪಟ್ಟರೆ ಸಂಬಂಧಪಟ್ಟ ಚೀಟರ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಮಾಯಕ ಯುವಕರ ಹಣಕ್ಕೆ ನ್ಯಾಯ ಸಿಗಬೇಕು; ಇಂಥ ವಂಚನೆಗಳಿಗೆ ಕಡಿವಾಣ ಬೀಳಬೇಕು…
ವೀಕ್ಷಕರೇ, ಎಚ್ಚರ..! ಚೀಟರ್ಗಳ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ…
ವಿಡಿಯೋ ಹಾಗೂ ಆಡಿಯೋ ದಾಖಲೆಗಳ ಸಮೇತ, ಈ ಚೀಟರ್ಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಹಿಂದಿನ ಸಂಪೂರ್ಣ ಸತ್ಯವನ್ನು ಮುಂದಿನ ವರದಿಯಲ್ಲಿ ನಿಮ್ಮ ಮುಂದೆ ಬಿಚ್ಚಿಡುತ್ತೇವೆ..! ಕಾದು ನೋಡಿ, ಮತ್ತಷ್ಟು ಸ್ಫೋಟಕ ಮಾಹಿತಿ ಶೀಘ್ರದಲ್ಲೇ..!
bigtvnews | Hubli Dharwad News | Kannada News | Karnataka News Hubli News | News In Hubli | Local news
