Breaking News

ದಶಕದ ಬಳಿಕ ಬಯಲಾಯ್ತು ಹಗರಣ: ನಕಲಿ ಅಂಕಪಟ್ಟಿ ನೀಡಿ ನೌಕರಿ ಗಿಟ್ಟಿಸಿದ್ದ 52 ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನತು!

ಬೆಂಗಳೂರು: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ಕಲ್ಯಾಣ ಕರ್ನಾಟಕ ವೃಂದದ 52 ಗ್ರೂಪ್‌-ಡಿ ನೌಕರರನ್ನು ಅಮಾನತುಗೊಳಿಸಲಾಗಿದೆ. 2016ರಲ್ಲಿ ನೇಮಕಗೊಂಡಿದ್ದ ಈ ಸಿಬ್ಬಂದಿ ವಿವಿಧ ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2023ರಲ್ಲಿ ಬಂದ ದೂರಿನ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಕೇವಲ 230 ಅಂಕ ಪಡೆದಿದ್ದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳ ಮೂಲಕ 625ಕ್ಕೆ 560ರಿಂದ 586 ಅಂಕ ಪಡೆದಿರುವಂತೆ ತೋರಿಸಿದ್ದರು. ದೃಢೀಕರಣ ಪತ್ರಗಳೂ ನಕಲಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ. ಅಲ್ಲದೆ, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

Share News

About BigTv News

Check Also

ಕಾರಿನ ಆಸೆ ತೋರಿಸಿ ಹಣಕ್ಕೆ ಕನ್ನ..! ಕಾರೂ ಇಲ್ಲ, ದುಡ್ಡೂ ಇಲ್ಲ..! ಯುವಕರಿಗೆ ವಂಚನೆ..!

ಹಗಲು ನಾಪತ್ತೆ, ಹಗಲು ಫೋನ್ ಸ್ವಿಚ್ ಆಫ್ ರಾತ್ರಿ ಫೋನ್ ಆನ್..! ವಿಡಿಯೋ–ಆಡಿಯೋ ದಾಖಲೆಗಳೊಂದಿಗೆ ವಂಚಕರ ಬಣ್ಣ ಬಯಲು..! ಮುಂದಿನ …

Leave a Reply

Your email address will not be published. Required fields are marked *