Breaking News

ಉಜಿರೆಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರ ಬಂಧನ

ಬೆಳ್ತಂಗಡಿ: ನಾವೂರಿನ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿಕುಮಾರ್ (31), ದಿನೇಶ್ ಪ್ರಭು (51) ಮತ್ತು ಸುರೇಶ್ ಪಿ.ಎನ್. (44) ಎಂದು ಗುರುತಿಸಲಾಗಿದೆ. ಅಕ್ಟೋಬರ್ 7ರ ತಡರಾತ್ರಿ ನಡೆದ ಬೆಂಕಿ ಹಚ್ಚಿದ ಘಟನೆಯಲ್ಲಿ ವೈದ್ಯಕೀಯ ಸಲಕರಣೆಗಳು ಹಾಗೂ ಔಷಧಿಗಳು ಸುಟ್ಟುಹೋಗಿದ್ದು, ಸುಮಾರು ₹3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಎಸ್‌ಪಿ ಅನಿಲ್‌ಕುಮಾರ್ ಬೂಮ ರೆಡ್ಡಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ. ಹಾಗೂ ಸಿಪಿಐ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Share News

About BigTv News

Check Also

ಕಾರಿನ ಆಸೆ ತೋರಿಸಿ ಹಣಕ್ಕೆ ಕನ್ನ..! ಕಾರೂ ಇಲ್ಲ, ದುಡ್ಡೂ ಇಲ್ಲ..! ಯುವಕರಿಗೆ ವಂಚನೆ..!

ಹಗಲು ನಾಪತ್ತೆ, ಹಗಲು ಫೋನ್ ಸ್ವಿಚ್ ಆಫ್ ರಾತ್ರಿ ಫೋನ್ ಆನ್..! ವಿಡಿಯೋ–ಆಡಿಯೋ ದಾಖಲೆಗಳೊಂದಿಗೆ ವಂಚಕರ ಬಣ್ಣ ಬಯಲು..! ಮುಂದಿನ …

Leave a Reply

Your email address will not be published. Required fields are marked *