ಬೆಂಗಳೂರು: ಒಎಲ್ಎಕ್ಸ್ನಲ್ಲಿ ಗ್ರಾಫಿಕ್ಸ್ ಕಾರ್ಡ್ ಖರೀದಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ₹1,61,660 ವಂಚಿಸಿದ್ದಾರೆ. ಅ. 4ರಂದು ದೂರುದಾರರು ಗ್ರಾಫಿಕ್ಸ್ ಕಾರ್ಡ್ಗಾಗಿ ಹುಡುಕಾಟ ನಡೆಸಿದಾಗ, ಗಣೇಶ್ ಎಲೆಕ್ಟ್ರಾನಿಕ್ಸ್ ಹೆಸರಿನ ಕಂಪನಿಯ ಜಾಹೀರಾತು ಕಂಡುಬಂದಿದೆ. ಬಳಿಕ ವಾಟ್ಸ್ಆಯಪ್ ಮೂಲಕ ಸಂಪರ್ಕಿಸಿದ ಆರೋಪಿಗಳು ಜಿಎಸ್ಟಿ ಬಿಲ್ ಕಳುಹಿಸಿ ನಂಬಿಕೆ ಮೂಡಿಸಿದ್ದಾರೆ. ಅ. 6ರಂದು ದೂರುದಾರರು ಆರೋಪಿಗಳು ನೀಡಿದ ಯುಪಿಐ ಐಡಿಗೆ ₹1 ಲಕ್ಷ ಹಾಗೂ ಮರುದಿನ ಮತ್ತೊಂದು ಯುಪಿಐ ಐಡಿಗೆ ₹61,660 ವರ್ಗಾಯಿಸಿದ್ದಾರೆ. ಅ. 10ರಂದು ಬ್ಲೂ ಡಾರ್ಟ್ ಕೊರಿಯರ್ ಮೂಲಕ ಗ್ರಾಫಿಕ್ಸ್ ಕಾರ್ಡ್ ಕಳುಹಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ, ಪಾರ್ಸೆಲ್ ಟ್ರ್ಯಾಕಿಂಗ್ ಐಡಿ ಕೇಳಿದಾಗ ನೀಡದೆ, ದೂರುದಾರರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಇದರಿಂದ ವಂಚನೆಗೊಳಗಾಗಿರುವುದು ಅರಿವಿಗೆ ಬಂದ ದೂರುದಾರರು ಸೈಬರ್ ಸಹಾಯವಾಣಿ 1930ಕ್ಕೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

