Breaking News

ಜನಾರ್ದನ ರೆಡ್ಡಿ ಜೊತೆಗಿನ ಸ್ನೇಹ ಯಾವತ್ತೂ ಶಾಶ್ವತ‌: ಶ್ರೀ ರಾಮುಲು

ಹುಬ್ಬಳ್ಳಿ : ಜನಾರ್ದನ ರೆಡ್ಡಿ ಜೊತೆಗಿನ ಸ್ನೇಹ ಯಾವತ್ತೂ ಶಾಶ್ವತ. BJP ನನಗೆ ರಾಜಕೀಯ ಸ್ಥಾನ ಮಾನ ಕೊಟ್ಟಿದೆ. ಸ್ನೇಹವನ್ನೂ ಬಿಡಲ್ಲ, ರಾಜಕಾರಣವನ್ನೂ ಬಿಡಲ್ಲ. ಕೇಂದ್ರದ ನಾಯಕರ ಜತೆ ಈ ಬಗ್ಗೆ ಮಾತನಾಡಿದ್ದೇನೆ‌ ಎಂದು ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ ಕುರಿತಂತೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ BJP ಯಲ್ಲಿ ಗೌರವ, ಸ್ಥಾನಮಾನ ಸಿಕ್ಕಿದೆ . ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಕೇವಲ ಸಾರ್ವಜನಿಕ ಜೀವನದಲ್ಲಿ ಬೆರೆಯಬೇಕು ಎಂದುಕೊಂಡಿದ್ದಾರೆ. ಜನಾರ್ಧನ ರಡ್ಡಿ ಅವರನ್ನ ಉಳಿಸಿಕೊಳ್ಳುವ ಕೆಲಸ BJP ಮಾಡುತ್ತೆ ಅನ್ನೊ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ನಮ್ಮೆಲ್ಲ ಹಿರಿಯರು ಸೇರಿ ಒಳ್ಳೆ ನಿರ್ಧಾರ ತೆಗೆದುಕೊಳ್ತಾರೆ ಎಂದು ತಿಳಿಸಿದರು.

Share News

About BigTv News

ಬಿ.ಶ್ರೀರಾಮುಲು

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *