Breaking News

ಮೂಡಿಗೆರೆ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಕೊಲೆ: ಆರೋಪಿಗಳ ಸೆರೆ

ಮೂಡಿಗೆರೆ: ಇಬ್ಬರು ಯುವಕರು ವ್ಯಕ್ತಿಯೊಬ್ಬರನ್ನು ಹಿಡಿದು ಜೋರಾಗಿ ತಳ್ಳಿದ ಪರಿಣಾಮ ಕೆಳಗೆ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಕುಂದೂರು ಗ್ರಾಮದ ಕಾರ್ಲಗದ್ದೆ ನಿವಾಸಿ ರವಿ (50) ಮೃತಪಟ್ಟವರು. ಮೃತರ ಪತ್ನಿ ನಳಿನಿ ನೀಡಿದ ದೂರಿನ ಪ್ರಕಾರ, ರವಿ ಮದ್ಯಪಾನ ಮಾಡಿ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬದವರು ಆತಂಕಗೊಂಡಿದ್ದರು. ರಾತ್ರಿ ಪೊಲೀಸರು ಕರೆ ಮಾಡಿ ರವಿ ಬಸ್ ನಿಲ್ದಾಣದಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. ಆಸ್ಪತ್ರೆಗೆ ತೆರಳಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬಿಳಗುಳ ಗ್ರಾಮದ ಪವನ್ (24) ಮತ್ತು ಗೌತಮ್ (23) ರವಿಯನ್ನು ಹಿಡಿದು ತಳ್ಳಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share News

About BigTv News

Check Also

ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!

ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ …

Leave a Reply

Your email address will not be published. Required fields are marked *