Breaking News

ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಭಿಕ್ಷಾಟನೆ : ಪೊಲೀಸರಿಂದ ಇಬ್ಬರು ಹೈಟೆಕ್ ಭಿಕ್ಷುಕರು ಅರೆಸ್ಟ್!

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಟರ್ಮಿನಲ್-2ರ ನಿರ್ಗಮನ ದ್ವಾರದ ಬಳಿ ವೆಂಕಟೇಶ್ ಕುಮಾರ್ ಮತ್ತು ಪ್ರತೀಕ್ ಬಾಟಿಯಾ ಎಂಬವರನ್ನು ಬಂಧಿಸಲಾಗಿದೆ. ಮಾಲಾ ವೇಷಧಾರಿಗಳಾಗಿ ಬಂದು ಭಿಕ್ಷಾಟನೆ ಮಾಡುತ್ತಿದ್ದ ಆರೋಪ ಇವರ ಮೇಲಿದೆ. ಕಳೆದ ಎರಡು ದಿನಗಳಿಂದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಇವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೂ ಮತ್ತೆ ಬಂದು ಭಿಕ್ಷಾಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

Share News

About BigTv News

Check Also

ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!

ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ …

Leave a Reply

Your email address will not be published. Required fields are marked *