Breaking News

ನಾಗರಬಾವಿ ರಿಂಗ್ ರೋಡ್ ವಕೀಲನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಾರ್ಟ್ ಅಟ್ಯಾಕ್ ಅಲ್ಲ, ಅದು ಭೀಕರ ಕೊಲೆ

ಬೆಂಗಳೂರು: ಆಟೋ ಬಾಡಿಗೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ವಕೀಲ ಶ್ರೀರಾಮ್ ಕೊಲೆಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆಟೋ ಚಾಲಕ ಮೇಘರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 9ರಂದು ಅಂಬೇಡ್ಕರ್ ಕಾಲೇಜು ಬಳಿ ಆಟೋ ಬಾಡಿಗೆ ವಿಚಾರವಾಗಿ ಶ್ರೀರಾಮ್ ಹಾಗೂ ಮೇಘರಾಜ್ ನಡುವೆ ಗಲಾಟೆಯಾಗಿತ್ತು. ಬಳಿಕ ಮೇಘರಾಜ್ ತನ್ನ ಸಹಚರರೊಂದಿಗೆ ಶ್ರೀರಾಮ್‌ ಅವರನ್ನು ಬೆನ್ನಟ್ಟಿ ತಲೆಗೆ ಹಲ್ಲೆ ನಡೆಸಿ, ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ. ಹಲ್ಲೆಯ ಬಳಿಕ ಕುಸಿದುಬಿದ್ದ ಶ್ರೀರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಹೃದಯಾಘಾತವೆಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಸಂಭವಿಸಿರುವುದು ದೃಢಪಟ್ಟಿದೆ. ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಅಮಾಯಕರಿಗೆ ಕಳ್ಳರ ಪಟ್ಟ ಕಟ್ಟಿ ಥಳಿತ – ಮಾರಣಾಂತಿಕ ಹಲ್ಲೆ!

ಬೆಂಗಳೂರು: ವಾಹನ ಅಡ್ಡ ಬಂದ ವಿಚಾರಕ್ಕೆ ರಸ್ತೆಯಲ್ಲಿ ಜಗಳವಾಡುತ್ತಿದ್ದ ಇಬ್ಬರು ಯುವಕರನ್ನು ಕಳ್ಳರೆಂದು ಭಾವಿಸಿ ಸ್ಥಳೀಯರು ಅಟ್ಟಾಡಿಸಿ ಹಲ್ಲೆ ನಡೆಸಿದ …

Leave a Reply

Your email address will not be published. Required fields are marked *