ಖ್ಯಾತ ಸಂಗೀತ ಕಾರ್ಯಕ್ರಮ ಸಂಯೋಜನ ಡೇವ್ ಶಾಪಿರೊ ಸೇರಿದಂತೆ ಆರು ಮಂದಿಯನ್ನು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದು ಗುರುವಾರ ಮುಂಜಾನೆ ಸ್ಯಾನ್ ಡಿಯಾಗೋ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಆರು ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಡೆದಿದೆ.ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಈ ಘಟನೆಯಲ್ಲಿ ಯಾರಾದರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಬೆಳಗಿನ ದಟ್ಟ ಮಂಜಿನ ನಡುವೆ ಹಾರಾಟ ನಡೆಸುತ್ತಿದ್ದ ವಿಮಾನವು ಮೊದಲು ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿಯಾಗಿ ಬಳಿಕ ಮನೆ ಮೇಲೆ ಪತನಗೊಂಡಿದೆ. ಇದರಿಂದಾಗಿ, ವಿಮಾನದ ಇಂಧನವು ಬೀದಿಗಳಲ್ಲಿ ಚೆಲ್ಲಿದ್ದು, ಹಲವು ವಾಹನಗಳಿಗೆ ಬೆಂಕಿ ತಗುಲಿದೆ ಎಂದು ವರದಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

