Breaking News

ಭಾರತ ಸೋಲಿಗೆ ಕಾರಣ ನೀಡಿದ ನಾಯಕ



ಮೂರನೇ ಟೆಸ್ಟ್ ಪಂದ್ಯ ಜೋಹಾನ್ಸ್​ಬರ್ಗ್​​ನಲ್ಲಿ  ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ  ಸೋಲು ಕಂಡಿದ್ದು ದಕ್ಷಿಣ ಆಫ್ರಿಕಾ 7 ವಿಕೆಟ್​ಗಳಿಂದ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ನಾಲ್ಕನೇ ದಿನ ಅರ್ಧ ದಿನ ಮಳೆ ಆಟ ನಡೆದರೂ ಆತಿಥೇಯರ ಗೆಲುವನ್ನು ತಡೆಯಲು ಆಗಲಿಲ್ಲ. ಆಫ್ರಿಕಾ ಕ್ಯಾಪ್ಟನ್ ಡೀನ್ ಎಲ್ಗರ್  ಭರ್ಜರಿ ಆಟವಾಡಿ ಸೌತ್ ಆಫ್ರಿಕಾಗೆ ನಿರೀಕ್ಷೆಮೀರಿದ ಸುಲಭ ಗೆಲುವು ತಂದುಕೊಟ್ಟರು.

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಒಂದೊಳ್ಳೆ ಅವಕಾಶವನ್ನು ಭಾರತ ಕೈಚೆಲ್ಲಿದೆ. ಇದೀಗ ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಸದ್ಯ 1-1ರಿಂದ ಸಮಬಲ ಸಾಧಿಸಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತ ಕೆಎಲ್ ರಾಹುಲ್  ಮೊದಲ ಪಂದ್ಯದಲ್ಲಿ ಸೋಲು ಕಂಡರು. ಪಂದ್ಯ ಮುಗಿದ ಬಳಿಕ ಅವರು ಮಾತನಾಡಿದ್ದಾರೆ.

“ಪ್ರತಿ ಟೆಸ್ಟ್ ಪಂದ್ಯವನ್ನು ನಾವು ಆಡಿದಾಗ ಗೆಲ್ಲಬೇಕೆಂದು ಭಯಸುತ್ತೇವೆ, ಅದಕ್ಕಾಗಿ ಕಠಿಣ ಪೈಪೋಟಿ ಕೂಡ ನಡೆಸುತ್ತೇವೆ. ಆದರೆ, ಈ ಬಾರಿ ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿತು, ಅವರು ಈ ಗೆಲುವಿಗೆ ಅರ್ಹರಾಗಿದ್ದರು. ನಾವು ನಾಲ್ಕನೇ ದಿನ ಫೀಲ್ಡ್ ಮಾಡಲು ಕಾತುರದಲ್ಲಿದ್ದೆವು, ಏನಾದರು ಹೊಸ ಪ್ರಯೋಗ ನಡೆಸಬೇಕು ಎಂಬುದು ನಮ್ಮ ಆಯ್ಕೆಯಾಗಿತ್ತು. 122 ರನ್ ಗಳಿಸುವುದು ಸುಲಭದ್ದಾಗಿರಲಿಲ್ಲ. ಪಿಚ್ ಅಪ್ ಮತ್ತು ಡೌನ್ ಇದ್ದ ಕಾರಣ ಬ್ಯಾಟಿಂಗ್ ಮಾಡಲು ಕಷ್ಟವಿತ್ತು. ಆದರೆ, ಸೌತ್ ಆಫ್ರಿಕಾ ಬ್ಯಾಟರ್​ಗಳು ಎಚ್ಚರಿಕೆಯಿಂದ ಉತ್ತಮ ಆಟವಾಡಿದರು” ಎಂದು ರಾಹುಲ್ ಹೇಳಿದ್ದಾರೆ.

Share News

About admin

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *