Breaking News

ವಿಜಯನಗರ | ಮಹಿಳೆ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ

ಹರಪನಹಳ್ಳಿ (ವಿಜಯನಗರ): ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿ ಹನುಮಂತಪ್ಪ ಎಂಬಾತನಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹10 ಲಕ್ಷ ದಂಡ ವಿಧಿಸಿದೆ. ಮಹಿಳೆಯನ್ನು ಪ್ರೀತಿಸುತ್ತಿದ್ದ ಹನುಮಂತಪ್ಪ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ಒಪ್ಪದಿದ್ದಾಗ 2023ರ ಮಾರ್ಚ್ 5ರಂದು ಮಗನೊಂದಿಗೆ ಹೋಗುತ್ತಿದ್ದ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಅವರು ಅ.31ರಂದು ಶಿಕ್ಷೆ ಪ್ರಕಟಿಸಿದ್ದಾರೆ. ದಂಡದ ಮೊತ್ತದಲ್ಲಿ ₹9.90 ಲಕ್ಷವನ್ನು ಮೃತ ಮಹಿಳೆಯ ಮಗನ ಹೆಸರಿನಲ್ಲಿ ಠೇವಣಿ ಇಡಲು ಆದೇಶಿಸಿದ್ದಾರೆ.

Share News

About BigTv News

Check Also

ಬಾಳೆಹೊನ್ನೂರು | ಕುಡಿದ ಮತ್ತಿನಲ್ಲಿ ಜೀವ ಬೆದರಿಕೆ: ಅಧಿಕಾರಿ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ವಿರುದ್ಧ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಕೊಲೆ ಬೆದರಿಕೆ …

Leave a Reply

Your email address will not be published. Required fields are marked *