ಬಾಗಲಕೋಟೆ: ಷೇರು ಮಾರುಕಟ್ಟೆ, ಐಪಿಒ ಹಾಗೂ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಇಳಕಲ್‌ನ ಮಕ್ಕಳ ವೈದ್ಯ ಹಾಗೂ ಜಮಖಂಡಿಯ ವೈದ್ಯರಿಗೆ ಒಟ್ಟು ₹1.70 ಕೋಟಿ ವಂಚಿಸಲಾಗಿದೆ. ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಗುಂಪುಗಳ ಮೂಲಕ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಲಾಗಿದೆ. ಇದಲ್ಲದೆ, ರಬಕವಿ-ಬನಹಟ್ಟಿಯ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ₹10.31 ಲಕ್ಷ ವಂಚಿಸಲಾಗಿದೆ. ವೆಬ್‌ಸೈಟ್ ಲಿಂಕ್ ಮೂಲಕ ಸಂಪರ್ಕಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ನಗರದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಪಾದರಕ್ಷೆಗಳ ಜಾಹೀರಾತು ತೋರಿಸಿ ವಾಟ್ಸ್‌ಆ್ಯಪ್ ಗುಂಪಿಗೆ ಸೇರಿಸಿಕೊಂಡು ₹1.99 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

