Breaking News

ದಾವಣಗೆರೆ: ಮಗಳ ಚಿಕಿತ್ಸೆಯ ನೆಪದಲ್ಲಿ ಮಹಿಳೆಗೆ ₹16.17 ಲಕ್ಷ ವಂಚನೆ

ಬೆಂಗಳೂರು: ಅಂಗವಿಕಲ ಮಗಳ ಚಿಕಿತ್ಸೆಗೆ ಬ್ರಿಟನ್ ಕರೆನ್ಸಿ ಕಳುಹಿಸುವುದಾಗಿ ನಂಬಿಸಿ ವಂಚಕನೊಬ್ಬ ಮಹಿಳೆಗೆ ₹16.17 ಲಕ್ಷ ವಂಚಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ತಾನು ಇಂಗ್ಲೆಂಡ್‌ನ ವೈದ್ಯನೆಂದು ಪರಿಚಯಿಸಿಕೊಂಡು ಮಹಿಳೆಗೆ ನೆರವು ನೀಡುವ ಭರವಸೆ ನೀಡಿದ್ದ. ಬ್ರಿಟನ್ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಲು ತೆರಿಗೆ ಮತ್ತು ಜಿಎಸ್‌ಟಿ ಪಾವತಿಸಬೇಕು ಎಂದು ಹೇಳಿ ಯುಪಿಐ ಮೂಲಕ ಹಣ ಪಡೆದುಕೊಂಡಿದ್ದಾನೆ. ಅನುಮಾನಗೊಂಡ ಮಹಿಳೆ ಸೈಬರ್ ಸಹಾಯವಾಣಿಗೆ ಕರೆ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ. ಇನ್ನೊಂದು ಪ್ರಕರಣದಲ್ಲಿ, ಗ್ಯಾಸ್ ಮೀಟರ್ ಅಪ್‌ಡೇಟ್ ಮಾಡುವ ನೆಪದಲ್ಲಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಸಿದ ವಂಚಕರು ಉದ್ಯಮಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ₹8.47 ಲಕ್ಷ ಲಪಟಾಯಿಸಿದ್ದಾರೆ. ಈ ಎರಡೂ ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ.

Share News

About BigTv News

Check Also

ಹುಬ್ಬಳ್ಳಿ ಅಂಜಲಿ ಅಂಬಿಗೇರ ಹಂತಕ ಗಿರೀಶ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಹುಬ್ಬಳ್ಳಿ: 2024ರ ಮೇ ತಿಂಗಳಲ್ಲಿ ನಡೆದಿದ್ದ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನಾಥ್‌ಗೆ ಹುಬ್ಬಳ್ಳಿ …

Leave a Reply

Your email address will not be published. Required fields are marked *