Breaking News

ನಾಳೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಮಹದಾಯಿಗಾಗಿ ಧರಣಿ

ಆಂಕರ್- ಮಹದಾಯಿ ಮಹಾ ತೀರ್ಪು ಅಗಸ್ಟ್ ಮೂರನೇವಾರದಲ್ಲಿ ಬರುವ ಹಿನ್ನೆಲೆಯಲ್ಲಿ ಮಹದಾಯಿ, ಕಳಸಾ ಮತ್ತು ಬಂಡೂರಿ ಹೋರಾಟಗಾರರು  ಬೆಂಗಳೂರು ಚೇಲೋ ಹಮ್ಮಿಕೊಂಡಿದ್ದು, ರೈತ ಹೋರಾಟಗಾರರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳಿಸಿದರು. ರೈತ ಸೇನಾ ಕರ್ನಾಟಕ ಸಂಘದ ಕೋಶಾಧ್ಯಕ್ಷ ಎಸ್ ಬಿ ಜೋಗಣ್ಣವರ ನೇತೃತ್ವದಲ್ಲಿ ಹುಬ್ಬಳ್ಳಿ ಬೆಂಗಳೂರ ಫಾಸ್ಟ ಪ್ಯಾಸೆಂಜರ್ ಟ್ರೇನ್ ಮೂಲಕ 30ಕ್ಕೂ ಹೆಚ್ಚು ರೈತರು ಬೆಂಗಳೂರಿನತ ಪ್ರಯಾಣ ಬೆಳೆಸಿದ್ದು,
ನಾಳೆ ಅಗಸ್ಟ್ ೧೧ ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ರೈತರು ಧರಣಿ ಆರಂಭಿಸಲಿದ್ದಾರೆ.  ಇದೇವೇಳೆ  ಮಹದಾಯಿ ಸಮನ್ವಯ ಸಮಿತಿಯ ಮುಖಂಡ ರಮೇಶ ನಾಯ್ಕರ ಮಾತನಾಡಿದ,  ಈಗಾಗಲೇ ಇನ್ನೂರಕ್ಕೂ ಹೆಚ್ಚು ರೈತರು ಕಳೆದ ಎಪ್ರಿಲ್ ೩೦ರಂದು ರಾಷ್ಟ್ರಪತಿಗಳಿಗೆ ದಯಾಮರ ನೀಡಿ ಇಲವಾದಲ್ಲಿ ಮಹದಾಯಿ ನೀರು ಕೊಡಿ ಎಂದು ಮನವಿ ಮಾಡಿದ್ವಿ ಆದ್ರೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲಾ, ಮಹದಾಯಿ ತೀರ್ಪು ನಮ್ಮ ಪರ ಬರುವ ನೀರಿಕ್ಷೆ ಇದೆ, ತೀರ್ಪು ರಾಜ್ಯದ ಪರ ಬಂದ್ರೆ ಫ್ರೀಡಂ ಪಾರ್ಕನಲ್ಲಿ ವಿಜಯೋತ್ಸವದ ಮಾಡುತ್ತೆವೆ, ಒಂದುವೇಳೆ ರಾಜ್ಯದ ವಿರುದ್ಧ ಬಂದಲ್ಲಿ ದಯಾ ಮರಣಕ್ಕೆ ಒತ್ತಾಯಿಸಿ ನಮ್ಮ ಧರಣಿ ಮುಂದುವರೆಸುತ್ತೆವೆ ಎಂದರು.
ಮೇಶ ನಾಯ್ಕರ (ಮಹದಾಯಿ ಹೋರಾಟಗಾರರು)
Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *