ಕೋಲಾರ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಭ್ರಷ್ಟರ ಮೇಲೆ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕರ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ನಾರಾಯಣಸ್ವಾಮಿ ಸಂಬಂಧಿಕರು ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವಮನೆಗಳ ಮೇಲೆ ದಾಳಿಯಾಗಿದೆ. ಅಧಿಕಾರಿ ನಾರಾಯಣಸ್ವಾಮಿ ಮಾವ ಶಿವಪ್ಪ, ತಾಯಿ ತುಳಸಮ್ಮ ನಿವಾಸಗಳ ಮೇಲೆ ಹಾಗೂ ಬೆಂಗಳೂರಿನ ಜಯನಗರ ನಿವಾಸ ಮತ್ತು ಚಿಂತಾಮಣಿ ತಾಲೂಕಿನ ಮಾದರಕಲ್ಲು ಸ್ವಗ್ರಾಮದ ನಿವಾಸದ ಮೇಲೆ ಏಕಕಾಲಕ್ಕೆ ಡಿವೈಎಸ್ಪಿ ವೆಂಕಟೇಶ್ ನಾಯುಡು ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಮನೆಯಲ್ಲಿ ದಾಖಲೆ ಪತ್ರಗಳನ್ನು ಅಧಿಕಾರಿ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





