ಬೆಂಗಳೂರು : ನಟ ಅರ್ಜುನ್ ಸರ್ಜಾ ವಿಸ್ಮಯ ಸಿನಿಮಾ ಶೂಟಿಂಗ್ ಸಮಯದಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವುದು ನಟಿ ಶ್ರುತಿ ಹರಿಹರನ್ ಆರೋಪ. #metoo ಹ್ಯಾಶ್ಟಾಗ್ನಡಿಯಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಈ ಆರೋಪಕ್ಕೆ ಪ್ರತಿಯಾಗಿ ಮೆಯೋಹಾಲ್ ಸಿಟಿಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ರು. ಪ್ರಕರಣದ ವಿಚಾರಣೆಯಲ್ಲಿ ಶೃತಿಗೆ ಲಿಖಿತ ಹೇಳಿಕೆ ಹಾಗೂ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರುತಿ ತಮ್ಮ ವಕೀಲರ ಮೂಲಕ ಸಲ್ಲಿಸಿರುವ ಆಕ್ಷೇಪಣೆ ಹಾಗೂ ಲಿಖಿತ ಹೇಳಿಕೆ ಫಸ್ಟ್ ನ್ಯೂಸ್ಗೆ ಲಭ್ಯವಾಗಿದ್ದು, ಅದರ ಸಾರಾಂಶ ಇಲ್ಲಿದೆ.1: ತಮ್ಮ ವಿರುದ್ಧದ ಆರೋಪದಿಂದ ಮಾನಹಾನಿಯಾಗಿದ್ದು, ಈ ಸಂಬಂಧ ಬಹಿರಂಗ ಹೇಳಿಕೆ ನೀಡದಂತೆ ಪರ್ಮನೆಂಟ್ ಇಂಜಕ್ಷನ್ ಆದೇಶ ಮತ್ತು ಕ್ಷಮೆ ಕೇಳುವಂತೆ ಮ್ಯಾಂಡೇಟರಿ ಇಂಜಕ್ಷನ್ ಆದೇಶಕ್ಕಾಗಿ ಕೋರ್ಟ್ನಲ್ಲಿ ಕೇಳಿರುವ ಅರ್ಜಿ ದೋಷಪೂರಿತವಾಗಿದ್ದು, ಕಟ್ಟುಕಥೆಯಿಂದ ಕೂಡಿದ್ದು ಹಾಗೂ ದುರುದ್ದೇಶ ಪೂರಿತವಾಗಿದೆ.2: ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿಯಲ್ಲಿರುವ ವಿಷಯಗಳು ಸತ್ಯಕ್ಕೆ ದೂರವಾಗಿವೆ. ಹಾಗೂ ಕಾನೂನು ಕ್ರಮ ಕೈಗೊಳ್ಳಲು ಸೂಕ್ತವಾದುದಲ್ಲ. ನಿಜವಾದ ಅಂಶಗಳನ್ನ ಈ ಕೆಳಗೆ ಉಲ್ಲೇಖಿಸಿದ್ದೇವೆ.3: ಶ್ರುತಿ ಹರಿಹರನ್ ಖ್ಯಾತ ನಟಿಯಾಗಿದ್ದು, ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ 25-30 ಸಿನಿಮಾ ಮಾಡಿದ್ದಾರೆ. 2016ರಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಇದೇ ಚಿತ್ರಕ್ಕಾಗಿ 2018ನೇ ಸಾಲಿನ 65th ಜಿಯೋ ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್ಗೆ ಒದಗಿಸಲಾಗಿದೆ.4: ಸೆಕ್ಸ್ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಶ್ರುತಿ ಸಿನಿಮಾ ಇಂಡಸ್ಟ್ರಿಯಲ್ಲಿ ಮುಕ್ತವಾಗಿ ಧ್ವನಿ ಎತ್ತುವವರಾಗಿದ್ದು, ಈ ಹಿಂದೆಯೂ ಇದೇ ವಿಚಾರದ ಬಗ್ಗೆ (ಕಾಸ್ಟಿಂಗ್ ಕೌಚ್) ಶ್ರುತಿಯವರು ಧ್ವನಿ ಎತ್ತಿದ್ದರು. ಅದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯನ್ನು ಕೋರ್ಟ್ಗೆ ಒದಗಿಸಲಾಗಿದೆ.5: ಇನ್ನು 2015ರಲ್ಲಿ ವಿಸ್ಮಯ ಸಿನಿಮಾದಲ್ಲಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಅವರ ಪತ್ನಿಯಾಗಿ ಪಾತ್ರ ನಿರ್ವಹಿಸಿದ್ದರು. ಅದಾಗಲೇ 150ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದ ಅರ್ಜುನ್ ಸರ್ಜಾ ಯುಂಗೆಸ್ಟ್ ಸ್ಟಾರ್ ಆಗಿದ್ದ ಶ್ರುತಿ ಹರಿಹರನ್‌ಗಿಂತ ತುಂಬಾನೇ ಹಿರಿಯರಾಗಿದ್ದರು. ಅವರು 50ವರ್ಷವನ್ನು ಪೂರೈಸಿದ್ದದ್ರೆ, ಆಗ ಶ್ರುತಿ ಹರಿಹರನ್ಗೆ 26ವರ್ಷ ವಯಸ್ಸಾಗಿತ್ತು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ.6: ವಿಸ್ಮಯ ಶೂಟಿಂಗ್ ಸಂದರ್ಭದಲ್ಲಿ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು. 2015ರ ನವೆಂಬರ್ನಲ್ಲಿ ರೋಮ್ಯಾಂಟಿಕ್ ಸೀನ್ನ ರಿಹರ್ಸಲ್ ಮಾಡುವಾಗ ಅರ್ಜುನ್ ಸರ್ಜಾ, ಏಕಾಏಕಿ ಹಿಂಬದಿಯಿಂದ ಶ್ರುತಿ ಹರಿಹರನ್‌ರನ್ನ ಅಪ್ಪಿಕೊಂಡಿದ್ದಾರೆ. ಅಲ್ಲದೆ, ಅವ್ರನ್ನು ಹಿಂದಿನಿಂದ ಸೆಳೆದು ಅಪ್ಪಿಕೊಂಡು, ನಿರ್ದೇಶಕರಿಗೆ ಈ ರೀತಿಯ ಐಡಿಯಾ ಮಾಡುವಂತೆ ಪ್ರೇರೆಪಿಸಿದ್ದಾರೆ. ಈ ವೇಳೆ ಶ್ರುತಿ ಆಘಾತಕ್ಕೊಳಗಾಗಿದ್ದರು. ಅಲ್ಲದೆ ಆ ಘಟನೆ ಅಸಹನೀಯವೆನಿಸಿದೆ. ಅಲ್ಲಿ ನಡೆದ ಘಟನೆಗಳು ಸೀನ್ನ ಭಾಗವೂ ಆಗಿರಲಿಲ್ಲ ಹಾಗೂ ಶ್ರುತಿಯವರ ಒಪ್ಪಿಗೆಯಿಂದಲೂ ನಡೆದಿರಲಿಲ್ಲ ಮತ್ತು ಅಲ್ಲಿ ಸರ್ಜಾರ ವರ್ತನೆ ವೃತಿಪರತೆಯಿಂದ ಕೂಡಿರಲಿಲ್ಲ.7: ಇನ್ನು ಇಂತಹ ಸೀನ್ಗಳ ಚಿತ್ರಿಕರಣದ ವೇಳೆ, ಪಾತ್ರಧಾರಿಗಳ ಅನುಮತಿಯನ್ನು ಪಡೆಯಲಾಗುತ್ತದೆ. ನಂತರ ಅದರ ರಿಹರ್ಸಲ್ ಹಾಗೂ ಶೂಟಿಂಗ್ ನಡೆಯುತ್ತದೆ. ಆದರೆ, ಸರ್ಜಾ ಯಾವುದೇ ಪೂರ್ವಾನುಮತಿ ಇಲ್ಲದೇ ಸೀನ್ ಇಂಪ್ರೂವೈಸೇಷನ್ ಮಾಡಲು ಮುಂದಾಗಿದ್ದರು. ಅಲ್ಲದೇ ಕಾಮಕೇಳಿಯಂತಹ ದೃಶ್ಯಗಳಿಗೆ ಸಂಬಂಧಿಸಿದಂತೆ ಟೇಕ್ಸ್‌ಗಳನ್ನ ಜಾಸ್ತಿ ತೆಗೆದುಕೊಳ್ತಿದ್ರು. ನೀವು ಈ ರೀತಿ ಇಂಪ್ರೂವೈಸ್ ಮಾಡಿದರೆ ನನಗೆ ತುಂಬಾ ಕಷ್ಟವಾಗುತ್ತೆ. ನನ್ನ ಹೆಸರಿಗೆ ಧಕ್ಕೆ ಬರುವಂತ ಸೀನ್‌ಗಳು ಆಗುತ್ತವೆ ಎಂದು ಹೇಳಿದ ಹೊರತಾಗ್ಯೂ ಶೂಟಿಂಗ್ ಸ್ಪಾಟ್ನಲ್ಲಿ ಕಿರುಕುಳ ಮುಂದುವರೆದಿತ್ತು. ಈ ಬಗ್ಗೆ ನಿರ್ದೇಶಕರ ಬಳಿಯೂ ದೂರು ಹೇಳಿದ್ದೆ.8: ಇನ್ನು ಈ ಘಟನೆಗಳ ಬಳಿಕ ಬೇಸರದಿಂದ ಶ್ರುತಿ ತಮ್ಮ ಕ್ಯಾರಾವಾನ್‌ಗೆ ತೆರಳಿದ್ದಾರೆ. ಅಲ್ಲಿ ಸಿನಿಮಾದ ಸಹಾಯಕ ನಿರ್ದೇಶಕ ನೀಲಕಂಠನ್ ಬಳಿ ತಮಗಾದ ನೋವನ್ನ ಹೇಳಿಕೊಂಡಿದ್ದಾರೆ. ಅಲ್ಲದೇ ಬರೀ ರಿಹರ್ಸಲ್ ನಿಲ್ಲಿಸಿ, ಒಂದೇ ಟೇಕ್‌ನಲ್ಲಿ ಶೂಟಿಂಗ್ ಮುಗಿಸಿಬಿಡೋಣ ಎಂದು ನಿರ್ಧರಿಸುತ್ತಾರೆ.9: ಇದಾದ ನಂತರ ಅಂದರೆ 2015ರ ಡಿಸೆಂಬರ್ನಲ್ಲಿ ದೇವನಹಳ್ಳಿ ಬಳಿ ಅರ್ಜುನ್ ಸರ್ಜಾ ತಮ್ಮ ಕಾರಿನ ಬಳಿ ಬಂದು ದೇವನಹಳ್ಳಿಯಲ್ಲಿ ಉಳಿದುಕೊಂಡಿದ್ದ ರೆಸಾರ್ಟ್ಗೆ ಬರುವಂತೆ ಕರೆಯುತ್ತಾರೆ. ನೀನು ಯಾಕೆ ವೇಯ್ಟ್ ಮಾಡುತ್ತಿದ್ದೀಯಾ ಬಾ ಎಂದು ಕರೆಯುತ್ತಾರೆ. ಅದನ್ನು ಶ್ರುತಿಯವರು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಇದಾದ ಬಳಿಕ 2016ರ ಜನವರಿಯಲ್ಲಿ ಯುಬಿಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಲಾಬಿಯಲ್ಲಿ ಕೂತಿರುವಾಗ ಅರ್ಜುನ್ ಸರ್ಜಾ ಬಂದು ಯಾಕೆ ಒಬ್ಬಳೇ ಕೂತಿದ್ದೀಯಾ.? ನಾನೂ ಕೂಡ ನನ್ನ ರೂಮಿನಲ್ಲಿ ಒಬ್ಬನೇ ಇದ್ದೇನೆ. ಬಾ ರೂಮಿಗೆ ಎಂದು ಕರೆದಿದ್ದಾರೆ. ಇದಕ್ಕೂ ಶ್ರುತಿ ನಿರಾಕರಿಸಿರುತ್ತಾರೆ. ಈ ಮೇಲ್ಕಂಡ ಘಟನೆಗಳಲ್ಲಿ ಸರ್ಜಾರ ನಡೆ ಸ್ವೀಕಾರವಲ್ಲದ್ದು ಮತ್ತು ಕಾಮೋದ್ದೇಶ ಪ್ರೇರಿತವಾಗಿದ್ದಾಗಿದೆ.10: 2017ರಲ್ಲಿ ಸಿನಿಮಾ ರಿಲೀಸ್ ಆಯ್ತು. ಆ ಸಂದರ್ಭದಲ್ಲಿ ಶ್ರುತಿಯವರು ವೃತ್ತಿಪರತೆಯನ್ನು ಮೆರೆದಿದ್ದಾರೆ. ಆದರೆ, ಸರ್ಜಾ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದರ ಹೊರತಾಗಿ ಸಿನಿಮಾಕ್ಕೆ ಸಂಬಂಧಿಸಿದಂತಹ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ರು.11: 2018, ಸೆಪ್ಟೆಂಬರ್ ತಿಂಗಳಲ್ಲಿ ಮೀಟೂ ಅಭಿಯಾನ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಒಂದಷ್ಟು ಹೆಣ್ಣು ಮಕ್ಕಳು ಧೈರ್ಯದಿಂದ ತಮಗಾದ ಅನ್ಯಾಯ, ಲೈಂಗಿಕ ಕಿರುಕುಳದ ಬಗ್ಗೆ ಹೇಳಲು ಪ್ರಾರಂಭಿಸಿದರು. ಈ ಹಿನ್ನೆಲೆ ಇದು ಸೂಕ್ತ ವೇದಿಕೆ ಎಂದು ಶ್ರುತಿ ಹರಿಹರನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.12: ಹರಿಹರನ್ ಈ ರೀತಿ ತನಗಾದ ನೋವನ್ನ ವ್ಯಕ್ತಪಡಿಸಿದ್ದನ್ನೂ ಸಹಿಸದ ಜನ ಶ್ರುತಿ ವಿರುದ್ಧ ಒಂದಷ್ಟು ಪೋಸ್ಟ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಆಕೆ ಸತ್ಯ ಹೇಳಿದ್ದಕ್ಕೆ ಬೆದರಿಕೆ ಕರೆಗಳು ಬಂದವು.13: ಇದಷ್ಟೇ ಅಲ್ಲದೆ, ಆಕೆಗೆ ಈವರೆಗೂ 500 ಬೆದರಿಕೆ ಕರೆಗಳು ಬಂದಿವೆ. ಅವಳ ಜೀವಕ್ಕೆ ಕುತ್ತು ತರುವ ಕರೆಗಳ ಜೊತೆಗೆ ಆಕೆಯ ಇಮೇಜ್ ಡ್ಯಾಮೇಜ್ ಮಾಡಲಾಗ್ತಿದೆ. ಆಕೆ ಎಲ್ಲೂ ಮಾಧ್ಯಮದ ಮುಂದೆ ಇದನ್ನು ಹೇಳಿಕೊಂಡಿಲ್ಲ. ಆದ್ರೆ, ಪ್ರತಿವಾದಿ ಇದನ್ನ ಎಲ್ಲಾ ಕಡೆಯಲ್ಲೂ ಹೇಳಿದ್ದಾರೆ ಎನ್ನುವ ಆರೋಪ ಮಾಡಿರುವುದು ಸರಿಯಲ್ಲ.14: ಶೃತಿ ಹರಿಹರನ್ ಮುಕ್ತವಾಗಿ ತನಗಾದ ನೋವು ಹೇಳಿದ ಬಳಿಕ, ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ಅರ್ಜುನ್ ಸರ್ಜಾರ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ರು. ಸೋಶಿಯಲ್ ಮೀಡಿಯಾದ ಒಂದು ತಾಣದಲ್ಲಿ ಮಹಿಳೆಯೊಬ್ಬರು ಅರ್ಜುನ್ ಸರ್ಜಾ ಹಾಗೂ ಇನ್ನೊಬ್ಬ ನಾಯಕ ನಟ ಕೆಲ ಕಾರ್ಯಕ್ರಮಗಳಿಗೆ ಹೋಗುತ್ತಿದ್ದುದೇ ಅಲ್ಲಿ ಹೆಣ್ಮಕ್ಕಳನ್ನ ಆಯ್ದುಕೊಂಡು ಅವರನ್ನು ಬಳಸಿಕೊಳ್ಳುವುದುಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಅಮೃತ ಜಿ ಎಂಬಾಕೆ ಕೂಡ ಅರ್ಜುನ್ ಸರ್ಜಾರಿಂದ ಆದ ಕಿರುಕುಳದ ಬಗ್ಗೆ ಫೇಸ್ಬುಕ್ನಲ್ಲಿ ಹೇಳಿದ್ದಾರೆ. ಇನ್ನೊಂದೆಡೆ ಶಾರದಾ ವಿಜಯ್ ಎಂಬ ಬ್ಲಾಗರ್ ತಮಗೆ ಅನಾಮಿಕರೊಬ್ಬರು ಅರ್ಜುನ್ ಸರ್ಜಾರಿಂದಾದ ಕಿರುಕುಳದ ಬಗ್ಗೆ ಹಲವು ಮೆಸೇಜ್ಗಳನ್ನು ಮಾಡಿದ್ರು ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿರುತ್ತಾರೆ. ಇದ್ಯಾವುದೂ ಶ್ರುತಿಯವರ ಹೇಳಿಕೆಗಳಾಗಿರುವುದಿಲ್ಲ ಬದಲಾಗಿ ಮಾಧ್ಯಮಗಳಲ್ಲಿ ಬಂದಿರುವಂತಹ ಅಂಶಗಳಾಗಿರುತ್ತವೆ.15: ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ. ಮತ್ತು ಅವರ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಜೀವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಕಂಪ್ಲೇಂಟ್ ದಾಖಲಿಸಿರುತ್ತಾರೆ. ಇನ್ನೂ ಈ ಸಂಬಂಧ ರಾಜ್ಯ ಮಹಿಳಾ ಆಯೋಗ ಕೂಡ ಸುಮುಟೋ ಕೇಸ್ ದಾಖಲು ಮಾಡಿಕೊಂಡಿದೆ.16: ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಶ್ರುತಿ ಹರಿಹರನ್ ಹೇಳಿರುವ ಎಲ್ಲಾ ವಿಷಯಗಳು ಸತ್ಯವಾಗಿದ್ದು, ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಮಾನನಷ್ಟ ಮೊಕದ್ದಮೆಯನ್ನು ಕೇವಲ ಅನ್ಯಾಯವನ್ನು ಹೇಳಿಕೊಳ್ಳಲು ಮುಕ್ತವಾಗಿ ಮುಂದಾಗಿದ್ದರ ಪರಿಣಾಮವಾಗಿ ದುರುದ್ದೇಶ ಪ್ರೇರಿತವಾಗಿ ಹಾಕಲಾಗಿದೆ.17: ಶ್ರುತಿ ಹರಿಹರನ್ ಕೊಟ್ಟ ಸ್ಟೇಟ್‌ಮೆಂಟ್ ಸತ್ಯವಾಗಿದ್ದು ಅವರ ಹೇಳಿಕೆಯಲ್ಲಿ ಮಾನನಷ್ಟದ ಯಾವುದೇ ಉದ್ದೇಶ ಇರುವುದಿಲ್ಲ. ಇನ್ನೂ ಮಾಧ್ಯಮದಲ್ಲಿ ಪ್ರಕಟಗೊಳ್ಳುವ ಸುದ್ದಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಮಾನನಷ್ಟ ಮೊಕದ್ದಮೆಗೆ ಆಸ್ಪದ ಕೊಡಬಾರದೆಂದು ಮನವಿ.19 : ಅರ್ಜುನ್ ಸರ್ಜಾ ಒಬ್ಬ ಪ್ರಖ್ಯಾತ ನಟ. ಆದರೆ ಕೇವಲ ಸೌತ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಅವರಾಗಿಲ್ಲ. ಅವರು 150 ಸಿನಿಮಾ ಮಾಡಿದ್ದಾರೆ ನಿಜ. ಆದರೆ ಅದರ ಹೊರತಾಗಿ ಅವರು ಕರ್ನಾಟಕದ ಹೆಮ್ಮೆ. ಅವರೊಬ್ಬ ಸುಸಂಸ್ಕೃತ ಮನೆಯಿಂದ ಬಂದವರು ಎನ್ನುವುದರ ಬಗ್ಗೆ ಹಾಗೂ ಅವರ ಕುಟುಂಬದ ವಿವರಗಳ ಬಗ್ಗೆ ಶ್ರುತಿಯವರಿಗೆ ಮಾಹಿತಿ ಇಲ್ಲ.20 : ಅರ್ಜುನ್ ಸರ್ಜಾ ಜಂಟಲ್ಮ್ಯಾನ್ ಚಿತ್ರದಲ್ಲಿ ಅಭಿನಯಿಸಿದ್ದು, ರಿಯಲ್ ಲೈಫ್ನಲ್ಲೂ ತಮ್ಮ ಫ್ಯಾನ್ಸ್ ಅವರನ್ನು ಜಂಟಲ್ಮ್ಯಾನ್ ಅಂತಾನೇ ಬಿಂಬಿಸುವಂತೆ ನೋಡಿಕೊಳ್ತಿದ್ದಾರೆ. ಮತ್ತು ತಾವೊಬ್ಬರು ಹನುಮಂತನ ಭಕ್ತ, ಆಸ್ತಿಕ ವ್ಯಕ್ತಿ ಎಂಬಂತಹ ಭಾವನೆಯನ್ನು ಬಿಂಬಿಸುತ್ತಿದ್ದಾರೆ. ಇನ್ನು ಚಿತ್ರರಂಗದ ವ್ಯಕ್ತಿಗಳು ಸರ್ಜಾರನ್ನ ಗೌರವಯುತವಾಗಿ ನೋಡುತ್ತಾರೆ ಎನ್ನುವುದು ಸುಳ್ಳು ಹಾಗೂ ಶ್ರುತಿಯವರಿಗೆ ತಿಳಿದಿರುವುದಿಲ್ಲ. ಈ ಬಗ್ಗೆ ಸರ್ಜಾ ಸ್ಪಷ್ಟ ಸಾಕ್ಷಿಗಳನ್ನು ನೀಡಬೇಕಾಗುತ್ತದೆ. ವಿಕಿಪೀಡಿಯಾದಲ್ಲಿ ನೀಡಿರುವ ಮಾಹಿತಿಗಳನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದಾಗಿದೆ.21: ಇನ್ನು ಮೀಟೂ ಅಭಿಯಾನವನ್ನು ಪಬ್ಲಿಸಿಟಿಗಾಗಿ ಮಾಡಲಾಗ್ತಿದೆ ಎನ್ನುವ ಆರೋಪ ಸುಳ್ಳು. ಇಲ್ಲಿ ಶ್ರುತಿಯವರಿಗೆ ಯಾವುದೇ ಹೆಚ್ಚುವರಿ ಪ್ರಚಾರದ ಅಗತ್ಯ ಇರುವುದಿಲ್ಲ. ಅವರು ಈಗಾಗಲೇ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದವರಾಗಿದ್ದಾರೆ. ಮತ್ತು ಮೀಟೂ ಹ್ಯಾಶ್ಟಾಗ್ನಡಿ ಬರೆದ ಪೋಸ್ಟ್ನಲ್ಲಿ ಶ್ರುತಿ ಆ ಅಭಿಯಾನದಿಂದ ಹೇಗೆ ಪ್ರೇರಿತರಾಗಿದ್ರು ಎನ್ನುವುದನ್ನು ನಮೂದಿಸಿದ್ದಾರೆ. ಇನ್ನೂ ಈ ಪೋಸ್ಟ್ನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶೃತಿಯವರ ಖಾತೆಗೆ ಹೆಚ್ಚು ಫಾಲೋವರ್ಸ್ ಆದರು ಎನ್ನುವುದು ಸರಿಯಲ್ಲ. ಈ ಪೋಸ್ಟ್ನ ಬಳಿಕ ಅವರ ಖಾತೆಯಲ್ಲಿ ಋಣಾತ್ಮಕ, ಅಶ್ಲೀಲ, ಅಸಭ್ಯ ಕಾಮೆಂಟ್ಸ್ ವ್ಯಕ್ತವಾಗಿದೆ. ಇನ್ನೂ FIRE ಸಂಸ್ಥೆಯಿಂದ ನಡೆಸಿದ ಪ್ರೆಸ್‌ಮೀಟ್ ಮೀಟೂ ಪರವಾಗಿಯೇ ನಿಂತಿತ್ತೆ ಹೊರತಾಗಿ, ಶ್ರುತಿಯವರ ಪರವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲ. ಮತ್ತೊಂದೆಡೆ ಶ್ರುತಿಯವರ ಹೇಳಿಕೆಯಿಂದ ಸರ್ಜಾರ ಕುಟುಂಬಕ್ಕೆ ನೋವಾಗಿದೆ ಎನ್ನುವುದಕ್ಕೂ ಶ್ರುತಿಯವರಿಗೂ ಸಂಬಂಧವಿಲ್ಲ. ಇಲ್ಲಿ ಸರ್ಜಾ ಹಾಗೂ ಅವರ ಬೆಂಬಲಿಗರು ಶ್ರುತಿಯವರಿಗೆ ಬೆದರಿಕೆಯನ್ನ ಹಾಕಿರುತ್ತಾರೆ.22: ಪ್ರತಿವಾದಿ ಅರ್ಜುನ್ ಸರ್ಜಾ ಹೇಳಿರುವಂತೆ ಶ್ರುತಿ ಕೊಟ್ಟ ಸ್ಟೇಟ್‌ಮೆಂಟ್ ಅರ್ಜುನ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎನ್ನುವುದು ಸಂಪೂರ್ಣ ಸುಳ್ಳು ಮತ್ತು ಇದರಿಂದ ತನ್ನ ಕುಟುಂಬಕ್ಕೆ ನಷ್ಟವಾಗಿದೆ ಎಂದಿದ್ದ ಅರ್ಜುನ್ ಸರ್ಜಾ ನಷ್ಟವಾದ ಬಗ್ಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಮತ್ತು ಈ ಸಂಬಂಧ ಶ್ರುತಿಯವರು ಕ್ರಿಮಿನಲ್ ಉದ್ದೇಶ ಇಟ್ಟುಕೊಂಡು ಆರೋಪ ಹೊರಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದದು. ಜೊತೆಯಲ್ಲಿ ಅರ್ಜುನ್ ಸರ್ಜಾರ ಕೆರಿಯರ್ ಹಾಳಾಗಿದೆ, ಅವರಿಗೆ ಬಂದ ಸಿನಿಮಾ ಹಿಂತಿರುಗಿ ಹೋಗಿದೆ. ಫ್ಯಾನ್ಸ್‌ಗಳಿಗೆ ನೋವಾಗಿದೆ. ಕ್ಲಬ್ ಮೆಂಬರ್ಸ್ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದಿದ್ದರು. ಇದಕ್ಕೆ ಸಂಬಂಧಿಸದಿಂತೆ ಯಾವುದೇ ದಾಖಲೆ ನೀಡಿಲ್ಲ. ಈ ನಿಟ್ಟಿನಲ್ಲಿ ಅವರ ಆರೋಪ ಸುಳ್ಳು.
bigtvnews | Hubli Dharwad News | Kannada News | Karnataka News Hubli News | News In Hubli | Local news





