ಕೊಂಡ ಆಯುವಾಗ ಆಯತಪ್ಪಿ ದೇವರ ಮೂರ್ತಿ ಕೆಳಗೆ ಬಿದ್ದ ಘಟನೆ ರಾಮನಗರ ಜಿಲ್ಲೆ
ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ಇಂದು
ಬೆಳಿಗ್ಗೆ ತೈಲೂರಮ್ಮ ದೇವಿಯ ಜಾತ್ರಾ ಮಹೋತ್ಸವ ದ ಅಂಗವಾಗಿ ಕೊಂಡ ಆಯುವ ವೇಳೆ ಪೂಜೆ ಕುಣಿತ
ಹೊತ್ತ ಗೋಪಿಸ್ವಾಮಿಯವರಿಗೆ ಆಯತಪ್ಪಿ ದೇವರ ವಿಗ್ರಹ ಕೇಳಗೆ ಬಿದಿದ್ದು, ಅದೃಷ್ಟವಶ
ಯಾವುದೆ ಗಾಯಗಳಾಗದೆ
ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಇನ್ನೂ ದೇವರ ಮೂರ್ತಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಶಾಂತಿಯ
ವಾತವರಣ ಉಂಟಾಗಿದೆ. ಹಲವು ವರ್ಷಗಳಿಂದಲ್ಲೂ ಸುಗಮವಾಗಿ ನಡೆದುಕೊಂಡು ಬಂದಿದ್ದ ಜಾಥ್ರೆಯಲ್ಲಿ ಯಾವುದೇ
ಅವಘಡ ಸಂಭವಿಸಿರಲಿಲ್ಲ. ಆದ್ರೇ ಈ ವರ್ಷ ನಡೆದ ಘಟನೆ ಯಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





