ಮಂಗಳೂರು: ಕಸಬಾ ಬೆಂಗ್ರೆ ಗ್ರಾಮದ ಮನೆಯ ಹಿಂಭಾಗದಲ್ಲಿ ದನವನ್ನು ವಧೆ ಮಾಡಿ ಮಾಂಸ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಪಣಂಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಫಹಾದ್ ಹಾಗೂ ಮೊಹಮ್ಮದ್ ನೌಫಲ್ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸೆ.10ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳು ದನದ ಮಾಂಸವನ್ನು ಪ್ಯಾಕ್ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಸ್ಥಳದಿಂದ ಸುಮಾರು 143 ಕೆ.ಜಿ. 800 ಗ್ರಾಂ ಮಾಂಸ, ದನದ ಚರ್ಮ, ತಲೆ, ಕಾಲುಗಳು, ಕೊಂಬು ಹಾಗೂ ಚೂರಿ, ಕತ್ತಿ, ಹಗ್ಗ ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಂಪಾದನೆ ಉದ್ದೇಶದಿಂದ ದನವನ್ನು ಕದ್ದು ತಂದು ವಧೆ ಮಾಡಿ ಮಾಂಸ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
