ನವದೆಹಲಿ: ಇದೊಂದು ಅಪರೂಪದ ಪ್ರೇಮ ಕಹಾನಿ, 33 ವರ್ಷದ ಮುಸ್ಲಿಂ ಯುವಕ ಹಿಂದು ಧರ್ಮದ ಹುಡುಗಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅಲ್ಲದೆ ತನ್ನ ಹೆಸರನ್ನು ಬದಲಿಸಿಕೊಂಡು ಆರ್ಯನ್ ಆರ್ಯ ಎಂದು ಇಟ್ಟುಕೊಂಡಿದ್ದಾನೆ.
23 ವರ್ಷದ ಜೈನ ಯುವತಿಯನ್ನು ಮದುವೆಯಾಗಿರುವ ಈ ಯುವಕ. ಈಗ ಆ ಯುವತಿಯ ಪೋಷಕರು ಹಾಗೂ ಹಿಂದೂ ಸಂಘಟನೆಗಳ ಒತ್ತಾಯ ಪೂರಕವಾಗಿ ತಮ್ಮನ್ನು ಬೇರೆ ಮಾಡುತ್ತಿವೆ ಎಂದು ಆರೋಪಿಸಿ ಸುರ್ಪಿಂ ಕೋರ್ಟ್ ಮೆಟ್ಟಿಲೇರಿದ್ದಾನೆ.ಇದೆ ಆಗಷ್ಟ್ 17 ರಂದು ಈ ವಿಚಾರವಾಗಿ ಸುಪ್ರಿಂಗೆ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎಎಂ ಖಾನ್ವಿಲ್ಕರ್,ಡಿ.ವೈ.ಚಂದ್ರಚೂಡರನ್ನು ಒಳಗೊಂಡ ಪೀಠವು ಆಗಸ್ಟ್ 27 ರಂದು ಕೋರ್ಟ್ ಮುಂದೆ ಆ ಮಹಿಳೆಯನ್ನು ಹಾಜರುಪಡಿಸಲು ಎಸ್ಪಿಗೆ ಸೂಚಿಸಲಾಯಿತು.
ಆಗ ಮಹಿಳೆಯ ಜೊತೆ ಸಂವಾದ ನಡೆಸಿದ ನ್ಯಾಯಪೀಠ ತಾವು ಮದುವೆಯಾಗಿದ್ದರೂ ಸಹಿತ ತಮ್ಮ ಪೋಷಕರ ಜೊತೆ ವಾಸಿಸುದಾಗಿ ತಿಳಿಸಿದ್ದಾರೆ ಅಲ್ಲದೆ ಇದಕ್ಕೆ ತಮ್ಮ ಪೋಷಕರ ಯಾವುದೇ ಒತ್ತಡವಿಲ್ಲ ಎಂದು ಆ ಮಹಿಳೆ ಸ್ಪಷ್ಟಪಡಿಸಿದ್ದಾಳೆ. ಆದರೆ ಆ ಯುವಕ ಆಕೆಗೆ ಮಾನಸಿಕ ಒತ್ತಡವನ್ನು ಹೇರಿ ಈ ರೀತಿ ಮಾಡಲಾಗಿದೆ ಎಂದು ಅವರು ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ “ಆಕೆ ವಯಸ್ಕಳಾಗಿದ್ದು ಆದ್ದರಿಂದ ಆಕೆ ತನ್ನ ಹಕ್ಕನ್ನು ಚಲಾವಣೆ ಮಾಡುವ ಸ್ವಾತಂತ್ರವಿದೆ.ಒಂದು ವೇಳೆ ತನ್ನ ಗಂಡನ ಹತ್ತಿರ ಹೋಗದಿದ್ದರೆ ಇದು ವಿವಾಹದ ಸಮಸ್ಯೆಯಾಗುತ್ತದೆ.ಆದ್ದರಿಂದ ಇದನ್ನು ಅದಕ್ಕೆ ಸಂಬಂಧಪಟ್ಟ ಕೋರ್ಟ್ ನಲ್ಲಿ ಬಗೆ ಹರಿಸಬೇಕು” ಎಂದು ಪೀಠ ತಿಳಿಸಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





