Breaking News

ಮೋದಿ ವಿರುದ್ಧ ಮಾತನಾಡಿದ್ರೆ ದೇಶ ದ್ರೋಹಿಗಳ ಪಟ್ಟ:ಸಂತೋಷ ಲಾಡ್ ಆಕ್ರೋಶ….

ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸಚಿವರು ಪ್ರಪಂಚದ ಎಲ್ಲರ ಬಗ್ಗೆಯೂ ಮಾತನಾಡಬಹುದು. ನಾವು ಕೇಂದ್ರ ಸಚಿವರ ಬಗ್ಗೆ ಮೋದಿಯವರ ಬಗ್ಗೆ ಮಾತನಾಡಬಾರದು. ಏನಾದರೂ ಮಾತನಾಡಿದರೇ ಸಂತೋಷ ಲಾಡ್ ಹಂಗೇ ಹಿಂಗೇ ಅಂತ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವರ

ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟ್ರಂಪ್ 25 ಬಾರಿ ಹೇಳಿದ್ದಾರೆ ಯುದ್ಧ ನಿಲ್ಲಿಸಿದ್ದು, ನಾನೇ ಅಂತ. ಆದರೆ ಯಾವುದೇ ಕೇಂದ್ರ ಸಚಿವರು ಈ ಬಗ್ಗೆ ಉತ್ತರ ಕೊಟ್ಟಿಲ್ಲ. ಟ್ರಂಪ್ ಯಾರ ಫ್ರೆಂಡ್, ಯಾರು ಉತ್ತರ ಕೊಡಬೇಕು. ಬಿಜೆಪಿಯ ಕೇಂದ್ರ ಸಚಿವರು ಗಾಂಧೀಜಿಯವರ ಬಗ್ಗೆ ಇಂದಿರಾ ಗಾಂಧಿಯವರ ಬಗ್ಗೆ ಬೇಕಾದರೂ ಮಾತನಾಡಬಹುದು ನಾವು ಮಾತನಾಡಿದರೇ ಮುಜುಗರ ಆಗುತ್ತೇ ಎಂದು ಕಿಡಿ ಕಾರಿದರು.ಬಿಜೆಪಿಯಲ್ಲಿ ಯಾರೂ ಇಂಗ್ಲಿಷ್ ಮಾತನಾಡುವ ನಾಯಕರು ಯಾರು ಇಲ್ಲವೇ ಈ ಶಶಿ ತರೂರ್ ಯಾಕೇ ಬೇಕು. 193 ರಾಷ್ಟ್ರಗಳ ಪೈಕಿ 183 ರಾಷ್ಟ್ರಗಳು ಪಾಕಿಸ್ತಾನಕ್ಕೆ ವೋಟ್ ಹಾಕಿದೆ. ನೇಪಾಳ ಹಿಂದೂ ರಾಷ್ಟ್ರ ಕೂಡ ನಮಗೆ ಸಪೋರ್ಟ್ ಮಾಡುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

Share News

About Shaikh BigTv

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *