Breaking News

ಎದೆಯುಬ್ಬಿಸಿ ಹೆಮ್ಮೆಯಿಂದ, ಮಗನಿಗೆ ಸೆಲ್ಯೂಟ್​ ಹೊಡೆಯುವ ಪೇದೆ ಅಪ್ಪ..!

ಲಖನೌ: ಅಪ್ಪ ಅಂದ್ರೆ ಅಕಾಶ ಅಂತಾರೇ, ಇನ್ನು ಅಪ್ಪ ಕೂಡ ಮಕ್ಕಳನ್ನು ಆಕಾಶಕ್ಕಿಂತ ಎತ್ತರ ಬೆಳಸುವ ಕನಸು ಕಂಡು ಮಗನ ಬೆಳವಣಿಗೆಗೆ ಬುನಾದಿ ಹಾಕುತ್ತಾರೆ. ಎಂಥಾ ತಂದೆಗೂ ಕೂಡ ತನ್ನ ಮಕ್ಕಳು ಒಳ್ಳೆಯವರಾಗಲಿ, ಜೀವನದಲ್ಲಿ ಉನ್ನತಿ ಸಾಧಿಸಲಿ ಎಂಬ ಆಶಯ ಇದ್ದೇ ಇರುತ್ತದೆ. ಇಂತಹುದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸ್​ ಕಾನ್​ಸ್ಟೇಬಲ್​ ಆಗಿದ್ದ ತಂದೆ, ತನ್ನ ಮಗನನ್ನು ಐಪಿಎಸ್​​ ಮಾಡಿಸಿದ್ದಾರೆ. ಇದೀಗ ವೃತ್ತಿ ನಿಷ್ಠೆ ಮೆರೆಯುತ್ತಾ.. ಎದೆಯುಬ್ಬಿಸಿ ಹೆಮ್ಮೆಯಿಂದ ಮಗನಿಗೆ ಸೆಲ್ಯೂಟ್​ ಸಹ ಹೊಡೆದಿದ್ದಾರೆ..!ಬಾಲಿವುಡ್​​ ಚಿತ್ರಗಳಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ, ತನ್ನ ಮಗನನ್ನು ದೊಡ್ಡ ಶ್ರೀಮಂತ ಮಾಡಿದ ದೃಶ್ಯಗಳನ್ನು ತೋರಿಸ್ತಾನೆ ಇರುತ್ತಾರೆ. ಆದ್ರೆ, ನಿಜ ಜೀವನದಲ್ಲಿ ಒಬ್ಬ ಪೇದೆ, ತನ್ನ ಮಗನನ್ನು ಐಪಿಎಸ್​​​ ಅಧಿಕಾರಿಯನ್ನಾಗಿ ಮಾಡಿ ನಿಜವಾದ ಹೀರೋ ಆಗಿದ್ದಾರೆ! ಮಗ ಐಪಿಎಸ್​​ ಅಧಿಕಾರಿ ಆಗಿದ್ದು ಕಂಡು ಅಪ್ಪ ಸಂತೋಷದಿಂದ ಬೀಗುತ್ತಿದ್ದರೆ, ತಂದೆಯ ಮೇಲೆ ಮಗನ ಪ್ರೀತಿಯು ಕೂಡ ಹೆಮ್ಮರವಾಗಿದೆ.ಉತ್ತರ ಪ್ರದೇಶದ ಪೇದೆಯೊಬ್ಬರು ತಮ್ಮ ಕನಸನ್ನು ಮಗನ ಮೂಲಕ ನನಸು ಮಾಡಿಕೊಂಡಿದ್ದಾರೆ. ಐಪಿಎಸ್​ ಆಫೀಸರ್​ ಆದ ಮಗನೇ ತಂದೆಗೆ ಹಿರಿಯ ಅಧಿಕಾರಿಯಾಗಿದ್ದಾನೆ. ಉತ್ತರ ಪ್ರದೇಶದ ವಿಭೂತಿಖಂಡ್​​​ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಾರ್ದನ್​ ಸಿಂಗ್​​ ತಮ್ಮ ಮಗನನ್ನು ಐಪಿಎಸ್​ ಮಾಡಿಸಿದ್ದಾರೆ. ಈತನ ಮಗನಾದ ಅನೂಪ್​ ಕುಮಾರ್​ ಈಗ ನಗರದ ಪೊಲೀಸ್​ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇನ್ನು, ಪೇದೆ ಜನಾರ್ದನ ಅವರು ಕೂಡ ಐಪಿಎಸ್ ಅಧಿಕಾರಿ ಅನೂಪ್​ ಅವರಿಗೆ ಪ್ರೀತಿಯಿಂದ ಗೌರವ ಸಲ್ಲಿಸುತ್ತಿದ್ದಾರೆ.ಪೇದೆ ಜನಾರ್ದನ್​​ ತಮ್ಮ ಮಗನ ಬಗ್ಗೆ ಮಾತನಾಡಿ, ಅನೂಪ್​ ಮೊದಲಿಗೆ ನನಗೆ ಆಫೀಸರ್,​ ಆಮೇಲಷ್ಟೇ.. ನನ್ನ ಮಗ. ಎಲ್ಲಾ ಆಫೀಸರ್​ಗೆ ಗೌರವಿಸಿದಂತೆ ನನ್ನ ಮಗನಿಗೂ ಗೌರವ ನೀಡುತ್ತೇನೆ. ಆತನು ಮಾಡಿದ ಎಲ್ಲಾ ಆಜ್ಞೆಗಳನ್ನು ಪಾಲಿಸುತ್ತೇನೆ. ನಮ್ಮ ಸಂಬಂಧ ನಮ್ಮ ವೃತ್ತಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜನಾರ್ದನ ಅವರು ಭಾವುಕರಾಗಿದ್ದಾರೆ.ಅನೂಪ್​​ 2014ರ ಬ್ಯಾಚ್​​​ನಲ್ಲಿ ನೇಮಕಗೊಂಡ ಐಪಿಎಸ್​ ಅಧಿಕಾರಿ. ಈಗ ಅನೂಪ್​​ ಲಕ್ನೋದ ಉತ್ತರ ವಲಯದ ಪೊಲೀಸ್​ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅನೂಪ್​​​, ತನ್ನ ತಂದೆಯೇ ನನಗೆ ಮೊದಲ ಪ್ರೇರಣೆ. ದಿನದ ಆರಂಭ ನನ್ನ ತಂದೆಯ ಪಾದಗಳನ್ನು ನಮಸ್ಕರಿಸುವ ಮೂಲಕ ಆರಂಭಿಸುತ್ತೇನೆ. ನನ್ನ ತಂದೆ ಅವರು ರೂಢಿಸಿಕೊಂಡ ಶಿಸ್ತನ್ನು ನಾನು ಅಳವಡಿಸಿಕೊಳ್ಳುತ್ತೇನೆ. ನನಗೆ ನನ್ನ ತಂದೆ ಓದು, ಆಟ ಆಡು ಎಂದು ಹೇಳುತ್ತಿರಲಿಲ್ಲ. ಆತನ ಒತ್ತಡ ನನಗೆ ಹೇಳುತ್ತಿರಲಿಲ್ಲ. ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರೂ ನಾವು ಏನೇ ಮಾಡಿದರೂ ಪೂರ್ಣ ಮನಸ್ಥಿತಿಯಿಂದ ಮಾಡಬೇಕು. ಒಂದು ವೇಳೆ ನೀನು ತೋಟದ ಮಾಲಿ ಆದರೇ, ತೋಟದಲ್ಲಿ ಬೆಳೆದ ಪ್ರತಿಯೊಂದು ಸಸಿಯನ್ನೂ ಮಗುವಿನಂತೆ ನೋಡಿಕೊಳ್ಳಬೇಕೆಂದು ತಂದೆ ಹೇಳುತ್ತಿರುತ್ತಾರೆ ಎಂದು ಅನೂಪ್​ ಹೇಳಿದರು.ಇನ್ನು, ಅಪ್ಪ-ಮಗ ಇಬ್ಬರು ಒಂದೇ ಮನೆಯಲ್ಲಿ ಲಕ್ನೋದಲ್ಲಿ ವಾಸವಾಗಿದ್ದಾರೆ. ನನ್ನ ಮತ್ತು ನನ್ನ ತಂಗಿಯನ್ನು ಸೈಕಲ್​ ಮೇಲೆ ನಮ್ಮ ಅಪ್ಪ ಶಾಲೆಗೆ ಬಿಡುತ್ತಿದ್ದರು. ನಮ್ಮನ್ನು ಓದಿಸಲು ನಮ್ಮ ಅಪ್ಪ ತುಂಬಾ ಶ್ರಮ ಹಾಕಿದ್ದಾರೆ. ನಮ್ಮ ವಿದ್ಯಾಭ್ಯಾಸಕ್ಕೆ ಅವರು ಯಾವುದೇ ತೊಂದರೆ ಮಾಡಲಿಲ್ಲ ಎಂದರು.ಅನೂಪ್​ ಈಗ ಅನ್ಸೂಲ್​ ಎಂಬಾಕೆಯನ್ನು ಮದುವೆ ಆಗಿದ್ದಾನೆ. ದಂಪತಿಗೆ ಒಂದು ವರ್ಷದ ಯಶಸ್ವಿನಿ ಹೆಣ್ಣು ಮಗುವಿದೆ. ಯಶಸ್ವಿನಿ ತಾತನೊಂದಿಗೆ ಆಟ ಆಡುತ್ತಿದ್ದಾಳೆ. ಕುಟುಂಬದಲ್ಲಿ ಈ ಬಾರಿಯ ದೀಪಾವಳಿ ಅತ್ಯಂತ ವಿಶೇಷವಾಗಿದೆ. ನಾವು ಹೊರಗಡೆ ಮಾತ್ರ ಅಧಿಕಾರಿ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡುತ್ತೇವೆ ಎಂದು ಅನೂಪ್​ ಹೇಳುತ್ತಾರೆ. ಅನೂಪ್, ದೆಹಲಿಯ ಜವಾಹರ್​ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅಮ್ಮ ಇದನ್ನೆಲ್ಲ ಮೌನವಾಗಿ ನೋಡುತ್ತಾ.. ಮತ್ತಷ್ಟು ಹೆಮ್ಮೆಯಿಂದ ಪತ್ನಿ, ಪುತ್ರ ಮತ್ತು ಮೊಮ್ಮಗಳೊಂದಿಗೆ ಅನೂಪ್ ತಾಯಿ ಸಂಭ್ರಮಿಸುತ್ತಿದ್ದಾರೆ!

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *