ವಿಶ್ವದ ದೊಡ್ಡಣ್ಣ ಅಮೆರಿಕಾ, ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಂತೆ ಹೇರಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಭಾರತವಲ್ಲದೆ, ನಿರ್ಬಂಧದಿಂದ ತೆರವುಗೊಳಿಸಿರುವ ಒಟ್ಟು 8 ರಾಷ್ಟ್ರಗಳ ಪಟ್ಟಿಯನ್ನು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪೊ ಬಿಡುಗಡೆಗೊಳಿಸಿದ್ದಾರೆ. ಚೀನಾ, ಜಪಾನ್, ಇಟಲಿ, ಗ್ರೀಸ್, ಸೌಥ್ ಕೊರಿಯಾ, ಟರ್ಕಿ ಪಟ್ಟಿಯಲ್ಲಿ ಸೇರಿವೆ. ಈ ಕುರಿತು ಮಾತನಾಡಿರುವ ಪ್ಯಾಂಟೊ, ಇರಾನ್ ಆಡಳಿತದ ನಡವಳಿಕೆಯನ್ನು ಬದಲಿಸುವ ಉದ್ದೇಶದಿಂದ ಯುಎಸ್ ಈ ರೀತಿಯ ಕಠಿಣವಾದ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ಈ ನಿರ್ಬಂಧಗಳು ಇರಾನ್ನ ಬ್ಯಾಂಕಿಂಗ್ ಮತ್ತು ಇಂಧನ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ ಎಂದರು. ನವೆಂಬರ್ 4ರ ವೇಳೆಗೆ ಇರಾನ್ನಿಂದ ತೈಲ ಖರೀದಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಅಮೆರಿಕ ಬಯಸಿದ್ದರೂ, ತೈಲ ಮಾರುಕಟ್ಟೆಯ ಮೇಲಾಗುವ ಹಾನಿಯನ್ನು ಪರಿಗಣಿಸಿ ನಿರ್ಬಂಧದ ಮೇಲೆ ಸಡಿಲತೆ ನೀಡಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





