Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಪ್ರಧಾನಿ ಮೋದಿಗೆ ಪ್ರಶಸ್ತಿ, ಸಮರ್ಥಿಸಿಕೊಂಡ ಫಿಲಿಪ್ ಕೊಟ್ಲರ್

ನವದೆಹಲಿ, ಜನವರಿ 16: ಅತ್ಯುತ್ತಮ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊಟ್ಟ ಮೊದಲ ಫಿಲಿಪ್ ಕೊಟ್ಲರ್ ಪ್ರೆಸಿಡೆನ್ಶಿಯಲ್ ಪ್ರಶಸ್ತಿ ಲಭಿಸಿದ್ದು, ಸೋಮವಾರ ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಮೋದಿ ಸ್ವೀಕರಿಸಿದರು.ಆದರೆ ಆ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಮೋದಿ ಅವರನ್ನು ಅಣಕಿಸಿದ್ದು, ಪ್ರಶಸ್ತಿ ನೀಡಿದ ಸಂಸ್ಥೆಗೂ ಇರಿಸುಮುರಿಸುಂಟು ಮಾಡಿತ್ತು.ಗುಪ್ತ್ ‘ಪ್ರಶಸ್ತಿ’ ಪಡೆದ ಮೋದಿಜೀಗೆ ಅಭಿನಂದನೆ, ರಾಹುಲ್ ಗಾಂಧಿಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಲೇಖಕ, ಅರ್ಥಶಾಸ್ತ್ರಜ್ಞ ಫಿಲಿಪ್ ಕೊಟ್ಲರ್, “ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡಿದೆ. ದೇಶಕ್ಕಾಗಿ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡುತ್ತಿದ್ದೇವೆ. ಆದರೆ ಭಾರತೀಯ ಮಾಧ್ಯಮಗಳು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿವೆ” ಎಂದು ಕೊಟ್ಲರ್ ಟ್ವೀಟ್ ಮಾಡಿದ್ದಾರೆ.”People, profit and planet” ಎಂಬುದನ್ನು ಆದ್ಯತೆಯನ್ನಾಗಿ ಹೊಂದಿರುವ ಈ ಪ್ರಶಸ್ತಿಯನ್ನು ಈ ಮೂರು ಅಂಶಗಳಿಗೆ ವ್ಯಕ್ತಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗುತ್ತದೆ.ಲೇಖಕ, ಅರ್ಥಶಾಸ್ತ್ರಜ್ಞ ಫಿಲಿಪ್ ಕೊಟ್ಲರ್ ಅವರ ಹೆಸರಿನಲ್ಲಿ ಕೊಡಾಡುವ ಈ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿದ ನಂತರ ಕೊಟ್ಲರ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.ಕಾಲೆಳೆದ ರಾಹುಲ್ ಗಾಂಧಿಫಿಲಿಪ್ ಕೊಟ್ಲರ್ ಪ್ರಶಸ್ತಿಗಾಗಿ ಮೋದಿ ಅವರನ್ನು ಬಿಜೆಪಿ ಮುಖಂಡರು, ಅಭಿಮಾನಿಗಳು ಅಭಿನಂದಿಸಿದರೆ, ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಪ್ರಶಸ್ತಿಯನ್ನು ಲೇವಡಿ ಮಾಡಿದ್ದಾರೆ. ಈ ಮೂಲಕ ಮೋದಿ ಅವರ ಕಾಲೆಳೆದಿದ್ದಾರೆ. ‘ವಿಶ್ವಪ್ರಸಿದ್ಧ ಕೊಟ್ಲರ್ ಪ್ರೆಸಿಡೆನ್ಷಿಯಲ್ ಪ್ರಶಸ್ತಿ ಪಡೆದ ನಮ್ಮ ಪ್ರಧಾನಿಗೆ ಅಭಿನಂದನೆಗಳು. ಈ ಪ್ರಶಸ್ತಿ ಎಷ್ಟು ಪ್ರಸಿದ್ಧ ಎಂದರೆ ಇದಕ್ಕೆ ಜ್ಯೂರಿಗಳಿಲ್ಲ, ಇದನ್ನು ಇದುವರೆಗೂ ಯಾರಿಗೂ ಕೊಟ್ಟಿರಲಿಲ್ಲ! ಅಷ್ಟೇ ಅಲ್ಲ, ಈ ಕಾರ್ಯಕ್ರಮದ ಪಾಲುದಾರರು ಪತಂಜಲಿ ಮತ್ತು ರಿಪಬ್ಲಿಕ್ ಟಿವಿ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *