Breaking News

ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ 7 ಜನ ಬಲಿ

ಲೂಧಿಯಾನ, ಪಂಜಾಬ್‌: ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಒಂದೇ ಕುಟುಂಬದ ಏಳು ಜನರು ಸಜೀವ ದಹನವಾಗಿರುವ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

ಮೃತರು ಬಿಹಾರದ ಸಮಸ್ತಿಪುರ ಜಿಲ್ಲೆಯ ಬೊಗೊಪುರ ಗ್ರಾಮದವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದರು ಎಂದು ತಿಬ್ಬಾ ಪೊಲೀಸ್‌ ಠಾಣೆಯ ಠಾಣಾಧಿಕಾರಿ ರಣ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್‌ ಆಯುಕ್ತ (ಪೂರ್ವ ವಲಯ) ಸುರಿಂದರ್‌ ಸಿಂಗ್‌, ‘ತಿಬ್ಬಾ ರಸ್ತೆ ಬಳಿಯಲ್ಲಿರುವ ತಮ್ಮ ಗುಡಿಸಲಿನಲ್ಲಿ ಸಾಹ್ನಿ ಕುಟುಂಬದವರು ಮ‍ಲಗಿರುವ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ’ ಎಂದು ತಿಳಿಸಿದ್ದಾರೆ.

ಸಾಹ್ನಿಯ ನೆರೆಮನೆಯವರಾದ ಬಿಂದೇಶಿ ಶರ್ಮಾ, ‘ಸಾಹ್ನಿ ಲೂಧಿಯಾನಕ್ಕೆ ಬಂದು 25 ವರ್ಷವಾಯಿತು. ಬೆಂಕಿ ಅವಘಡ ಸಂಭವಿಸುವುದಕ್ಕೂ ಮುಂಚೆ ಬಡಾವಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಬೇಕು’ ಎಂದು ತಿಳಿಸಿದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *