Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

ನವದೆಹಲಿ: ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾದ ಜೋಡಿ ಎಂದರೆ ಅದು ಅರ್ಜುನ್ ಕಪೂರ್ -ಮಲೈಕಾ ಆರೋರಾ ಜೋಡಿ. ಆಗಾಗ ಪಾರ್ಟಿ, ವಿದೇಶಿ ಪ್ರವಾಸ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಈಗ ತಮ್ಮ ಪ್ರೀತಿಯ ವಿಚಾರವಾಗಿ ಮೌನ ಮುರಿದಿದೆ. ಅರ್ಜುನ್ ಕಪೂರ್ ಅವರ ಬಹುನಿರೀಕ್ಷಿತ ಚಿತ್ರ ಇಂಡಿಯಾಸ್ ಮೋಸ್ಟ್ ವಾಂಟೆಡ್’ ಚಿತ್ರದ ಸ್ಕ್ರೀನಿಂಗ್ ಗಳಲ್ಲಿ ನಿರಂತರವಾಗಿ ಭಾಗವಹಿಸಿ ಕೊನೆಗೂ ತಮ್ಮ ಲವ್ ಸಮಾಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಫಿಲಂ ಫೇರ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅರ್ಜುನ್ ಕಪೂರ್ ” “ಮಾಧ್ಯಮವು ನಮಗೆ ಘನತೆಯನ್ನು ಕೊಟ್ಟಿದೆ ಎಂದು ನಾವು ಭಾವಿಸಿದ್ದೇವೆ, ಮಾಧ್ಯಮಗಳು ತಿಳುವಳಿಕೆಯುಳ್ಳದ್ದಾಗಿದೆ…ಅದರ ಗೌರವ, ದಯೆ, ಪ್ರಾಮಾಣಿಕತೆ ಮತ್ತು ಯೋಗ್ಯತೆ ಬಗ್ಗೆ ನಂಬಿಕೆ ಇದೆ.ಈ ಹಿನ್ನಲೆಯಲ್ಲಿ ನನಗೆ ಆರಾಮದಾಯಕ ಎನಿಸಿದೆ” ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.ಮಾಧ್ಯಮಗಳಲ್ಲಿ ಹಲವಾರು ಬಾರಿ ಈ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದ ಈ ಜೋಡಿ ಈಗ ಕೊನೆಗೂ ತಮ್ಮ ನಡುವಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಕೆಲವು ಸಂಗತಿಗಳನ್ನು ಉದ್ದೆಶಪೂರಕವಾಗಿ ಬರೆಯುವುದು ನಿಮ್ಮನ್ನು ಕಂಗೆಡಿಸುತ್ತದೆ. ಜೊತೆಯಾಗಿ ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಹೋಗುವಾಗ ಜೊತೆಯಾಗಿ ನಡೆಯುವುದು ಇವೆಲ್ಲ ಸಾಮಾನ್ಯ ಸಂಗತಿ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.ಇನ್ನು ಮುಂದುವರೆದು ಮಾತನಾಡಿದ ಅರ್ಜುನ್ ಕಪೂರ್ “ನಾವು ಮನೆಯೊಳಗೆ ಕುಳಿತುಕೊಳ್ಳಬಾರದೆಂದು ಹೇಳಿದ್ದೇನೆ, ಏಕೆಂದರೆ ನಾವು ಅಡಗಿಸುತ್ತಿದ್ದೇವೆ ಎಂದು ತೋರುತ್ತಿರುತ್ತದೆ. ಆದ್ದರಿಂದ ನಾವು ಹಾಗೆ ಇಲ್ಲದಿದ್ದ ವೇಳೆ ಎಲ್ಲವು ಸಹಜವೆನ್ನುವಂತೆ ಇರಲಿ, ಇದರಿಂದ ನನ್ನ ಅಕ್ಕಪಕ್ಕದವರು ತೊಂದರೆಗೀಡಾಗಬಾರದು, ಅವಳ ನೆರೆಹೊರೆಯವರನ್ನು ತೊಂದರೆಗೊಳಗಾಗಬಾರದು . ನಾವೇನು ತಪ್ಪು ಮಾಡಿಲ್ಲ ನಾವು ಅಡಗಿಡುತ್ತಿದ್ದೇವೆ ಎನ್ನುವ ಸ್ಟೋರಿಗಳು ಬೇಡ ಏಕೆಂದರೆ ನಾವು ಅದನ್ನು ಮಾಡುತ್ತಿಲ್ಲ. ಇದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

Share News

About Shaikh BIG TV NEWS, Hubballi

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *